ಪ್ರಕೃತಿಯ ಮಡಿಲಲ್ಲಿ ವಿಜ್ಞಾನದ ವಿಶ್ಲೇಷಣೆಯ ವಿಸ್ತಾರಕ್ಕೆ ನಿಲುಕದ ಅದೆಷ್ಟೋ ಅದ್ಭುತಗಳಿವೆ. ಇವುಗಳ ಬಗ್ಗೆ ಪರಿಸರ ಪ್ರೇಮಿಗಳು ಆಗಾಗ ವಿಶೇಷವಾದ ವಿಡಿಯೋಗಳನ್ನು ಮಾಡಿಕೊಂಡು ಪ್ರೆಸೆಂಟ್ ಮಾಡುತ್ತಲೇ ಬಂದಿದ್ದಾರೆ.
ಟರ್ಮಿನಾಲಿಯಾ ಎಲಿಪ್ಟಿಕಾ ಎಂಬ ವೈಜ್ಞಾನಿಕ ಹೆಸರಿನ ಮರವೊಂದು ಬೇಸಿಗೆಗಾಲದಲ್ಲಿ ಬಳಸಲೆಂದು ತನ್ನೊಡಲಲ್ಲಿ ನೀರನ್ನು ಸಂಗ್ರಹಣೆ ಮಾಡಿಕೊಳ್ಳುವ ವಿಡಿಯೋವೊಂದನ್ನು ಭಾರತೀಯ ಅರಣ್ಯ ಸೇವಾ ಅಧಿಕಾರಿ ದಿಗ್ವಿಜಯ್ ಸಿಂಗ್ ಶೇರ್ ಮಾಡಿಕೊಂಡಿದ್ದಾರೆ.
ಮರದ ಕಾಂಡಕ್ಕೆ ಚೂರಿಯಿಂದ ತಿವಿದ ಕೂಡಲೇ ನೀರಿನ ಬುಗ್ಗೆ ಚಿಮ್ಮುವುದನ್ನು ಈ ವಿಡಿಯೋದಲ್ಲಿ ಕಾಣಬಹುದಾಗಿದೆ. ಈ ನೀರು ಹೊಟ್ಟೆಯ ಆರೋಗ್ಯ ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ ಎಂಬ ನಂಬಿಕೆ ಇದೆ. ಇದಲ್ಲದೇ ಈ ಮರಗಳು ಬೆಂಕಿಯನ್ನು ತಾಳಿಕೊಂಡು ನಿಲ್ಲಬಲ್ಲವಾಗಿವೆ. ಈ ವಿಡಿಯೋಗೆ ಅದಾಗಲೇ ಲಕ್ಷಕ್ಕಿಂತ ಹೆಚ್ಚು ವೀವ್ಸ್ ಬಂದಿದ್ದು, ಟ್ವಿಟ್ಟಿಗರು ನೋಡಿ ಚಕಿತರಾಗಿದ್ದಾರೆ.