
ಜಾರ್ಖಂಡ್ ನ ಪಲಾಮು ಎಂಬಲ್ಲಿ ತುಂಬಿ ಹರಿಯುತ್ತಿದ್ದ ಮಲಾಯ್ ನದಿಗೆ ಹಾರಿದ ಯುವಕರ ಪಡೆ, ನವದಂಪತಿಗಳನ್ನ ರಕ್ಷಿಸಿ ಸಾಹಸ ಮೆರೆದಿದೆ.
ಜೋರು ಮಳೆ. ದಾರಿಯ ಪಕ್ಕದಲ್ಲೇ ಮೈದುಂಬಿ ಹರಿಯುತ್ತಿರುವ ಮಲಾಯ್ ನದಿ. ನೋಡನೋಡುತ್ತಲೇ ನವಜೋಡಿಯನ್ನ ಒಯ್ಯುತ್ತಿದ್ದ ದಿಬ್ಬಣದ ಕಾರು ರಸ್ತೆಯಿಂದ ನದಿಯೆಡೆಗೆ ಹೊರಟೇ ಬಿಟ್ಟಿತು.
ಒಂದು ಕ್ಷಣ ಅಲ್ಲೇನು ನಡೆಯುತ್ತಿದೆ ಎಂಬುದೇ ಅರ್ಥವಾಗಿರಲಿಲ್ಲ. ತಕ್ಷಣವೇ ಜನರೆಲ್ಲರೂ ಓಡಿಬಂದರು. ಆದರೆ, ಕಾರು ತೇಲಿ ಹೋಗುತ್ತಿದೆ.
ಕೂಡಲೇ ಕಾರ್ಯಪ್ರವೃತ್ತರಾದ ಯುವಕರ ಪಡೆಯೊಂದು, ಹಿರಿಯರ ಮಾರ್ಗದಶರ್ನದಲ್ಲಿ ಹೊಳೆಗೆ ಹಾರಿಯೇ ಬಿಟ್ಟಿತು. ಹಗ್ಗ ಬಳಸಿ ಕೊಚ್ಚಿ ಹೋಗುತ್ತಿದ್ದ ಕಾರನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು. ಕೊನೆಗೂ ಕಾರಿನಲ್ಲಿದ್ದ ನವದಂಪತಿ ಹಾಗೂ ಮೂವರು ಸಂಬಂಧಿಕರ ಜೀವ ಉಳಿಸಿದರು.