ಬಲೆಗೆ ಬಿದ್ದಿದ್ದ ದೈತ್ಯ ಶಾರ್ಕ್ ರಕ್ಷಿಸಿದ ಮೀನುಗಾರರು 15-12-2020 9:22PM IST / No Comments / Posted In: Latest News, India ತಿರವನಂತಪುರದ ಸುಮಾರು 60ಕ್ಕೂ ಹೆಚ್ಚು ಮೀನುಗಾರರು ಸೇರಿ ಬಲೆಗೆ ಬಿದ್ದ ಅಳಿವನಂಚಿನ ದೈತ್ಯ ಶಾರ್ಕ್ನ್ನ ಸಮುದ್ರಕ್ಕೆ ವಾಪಸ್ ಕಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಚಂಡಮಾರುತದದ ಭೀತಿ ಹಿನ್ನೆಲೆ ಆಳ ಸಮುದ್ರ ಮೀನುಗಾರಿಕೆಗೆ ಕೇರಳದಲ್ಲಿ ನಿಷೇಧ ಹೇರಲಾಗಿದೆ. ಹೀಗಾಗಿ ಕೆಲ ಮೀನುಗಾರರು ಸಮುದ್ರ ತಟದ ಬದಿಯಲ್ಲೇ ಬಲೆ ಹಾಕಿದ್ದರು. ಈ ವೇಳೆ ದೈತ್ಯ ಶಾರ್ಕ್ ಅವರ ಬಲೆಗೆ ಸಿಕ್ಕಿ ಹಾಕಿಕೊಂಡಿತ್ತು. ದೈತ್ಯ ಮೀನನ್ನ ವಾಪಸ್ ಸಮುದ್ರಕ್ಕೆ ಬಿಡಲು ನಿರ್ಧರಿಸಿದ ಸುಮಾರು 60ಕ್ಕೂ ಹೆಚ್ಚು ಮೀನುಗಾರರು ಸಾಕಷ್ಟು ಪ್ರಯತ್ನ ಪಟ್ಟಿದ್ದಾರೆ. ಆರಂಭದಲ್ಲಿ ಮೀನುಗಾರರು ಶಾರ್ಕ್ ಬದುಕುಳಿಯೋದು ಕಷ್ಟ ಅಂತಾನೇ ಭಾವಿಸಿದ್ರು. ಆದರೆ ಮೀನುಗಾರರ ಅವಿರತ ಪರಿಶ್ರಮದ ಬಳಿಕ ಶಾರ್ಕ್ ಸೇಫ್ ಆಗಿ ಸಮುದ್ರದಾಳಕ್ಕೆ ಹೋಗಿದೆ. ಇನ್ನು ಈ ವಿಚಾರವಾಗಿ ಮಾತನಾಡಿದ ಅಧಿಕಾರಿ ಶಾಜಿ ಜೋನ್, ದೈತ್ಯ ಶಾರ್ಕ್ ಅಳಿವಿನಂಚಿನಲ್ಲಿರುವ ಪ್ರಭೇದವಾಗಿದೆ. ಶಾರ್ಕ್ನ್ನ ರಕ್ಷಿಸಿದ ಮೀನುಗಾರರಿಗೆ ಸೂಕ್ತ ಬಹುಮಾನ ನೀಡಲಾಗುವುದು ಎಂದು ಹೇಳಿದ್ರು. Watch: An endangered whale shark released into the sea by fishermen in Kerala's Shanghmukham on Friday, after it was caught in their net. A group of fishermen tore into the net, and helped it back, in a matter of minutes, says Ajith. Video courtesy: Ajith Shanghmukham. pic.twitter.com/jDcr12VCuK — Sneha Koshy (@SnehaMKoshy) December 5, 2020