ಅತ್ತ ಕೇಂದ್ರ ಸರ್ಕಾರವು ವಾರಾಣಸಿಯನ್ನು ಜಪಾನ್ ಕ್ಯೋಟೋ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಹೊರಟಿದ್ದರೆ, ಇತ್ತ ದೆಹಲಿಯ ರಸ್ತೆಯು ಇಟಲಿಯ ವೆನಿಸ್ ಮಾದರಿಯಂತೆ ದ್ವೀಪವಾಗಿ ಮಾರ್ಪಟ್ಟಿದೆ.
ಭಾರೀ ಮಳೆಯಿಂದಾಗಿ ರಸ್ತೆಯಲ್ಲೇ ನೀರು ನಿಂತಿದ್ದು, ಇದನ್ನು ಕಂಡ ಮಕ್ಕಳು ಆ ನೀರಿನಲ್ಲೇ ಈಜಾಡಿ ಸಂತೋಷಪಟ್ಟರು. ಆದರೆ, ಮಳೆ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಮಾಡದ ಆಡಳಿತದ ವಿರುದ್ಧ ಜನಾಕ್ರೋಶ ವ್ಯಕ್ತವಾಗಿದೆ.
ನಿಂತ ಮಳೆ ನೀರಿನಲ್ಲಿ ಈಜಾಡುತ್ತಿರುವ ಮಕ್ಕಳ ವಿಡಿಯೋ ಟ್ವಿಟ್ಟರ್ ನಲ್ಲಿ ವೈರಲ್ ಆಗಿದ್ದು, ಮಕ್ಕಳಿಗೆ ಈಜುಕೊಳ ಮಾಡಿಕೊಟ್ಟ ಜನಪ್ರತಿನಿಧಿಗಳಿಗೆ ಅಭಿನಂದನೆ ಸಲ್ಲಿಸಲೇಬೇಕು ಎಂದು ಜನ ವ್ಯಂಗ್ಯವಾಡಿದ್ದಾರೆ.