
ತನ್ನ ವಿರುದ್ಧ ಹೇರಲಾಗಿರುವ ವಂಚನೆ ಆರೋಪದ ವಿರುದ್ಧ ಮಾತನಾಡುತ್ತಾ ಗೌರವ್ ವಾಸನ್ ಭಾವುಕರಾಗಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರೇಡಿಯೋ ಚಾನೆಲ್ವೊಂದರ ಸಂದರ್ಶನದಲ್ಲಿ ಭಾಗಿಯಾಗಿದ್ದ ಗೌರವ್, ನಾನು ಅವರನ್ನ ನನ್ನ ತಂದೆ – ತಾಯಿ ಎಂದುಕೊಂಡು ಸಹಾಯ ಮಾಡಿದೆ. ಆದರೆ ಇದೀಗ ನನ್ನ ಮೇಲೆ ಆರೋಪ ಹೊರಿಸಲಾಗಿದೆ. ಬಹುಶಃ ಇದೇ ಭಯದಿಂದಲೇ ಜಗತ್ತಿನ ಅನೇಕರು ಇನ್ನೊಬ್ಬರಿಗೆ ಸಹಾಯ ಹಸ್ತ ಚಾಚೋಕೆ ಹಿಂಜರಿಯುತ್ತಾರೆ ಅಂತಾ ಹೇಳಿ ಕಣ್ಣೀರು ಹಾಕಿದ್ರು.
ಈ ವಿಡಿಯೋ ವೈರಲ್ ಆಗ್ತಿದ್ದಂತೆ ಬಹುತೇಕ ನೆಟ್ಟಿಗರು ಗೌರವ್ ವಾಸನ್ ಪರ ಬೆಂಬಲ ಸೂಚಿಸಿದ್ದಾರೆ .