ದೇಶದಲ್ಲಿ ಭಾರಿ ಆತಂಕ ಸೃಷ್ಟಿಸಿರುವ ಮಿಡತೆಗಳು ಇದೀಗ ಉತ್ತರಪ್ರದೇಶದ ಪ್ರಯಾಗ್‌ರಾಜ್‌ಗೆ ಕಾಲಿಟ್ಟಿದ್ದು ಸ್ಥಳೀಯರಲ್ಲಿ ಭಾರಿ ಆತಂಕ ಸೃಷ್ಟಿಸಿದೆ.
ಮಿರಾಜ್‌ಪುರದಿಂದ ಪ್ರಯಾಗ್‌ರಾಜ್ ಕಡೆ ಹಾರಿ ಬಂದಿರುವ ಮಿಡತೆಗಳ ಹಿಂಡು ಸುಮಾರು ಒಂದು ಕಿಮೀ ಉದ್ದ ಮೂರು ಕಿಮೀ ಅಗಲದಲ್ಲಿದೆ ಎಂದು ಅಂದಾಜಿಸಲಾಗಿದೆ. ಮಿಡತೆಗಳು ಬುಧವಾರ ಕಾಣಿಸಿಕೊಂಡಿದ್ದರೂ ಯಾವುದೇ ದೊಡ್ಡ ಪ್ರಮಾಣದ ಬೆಳೆ ನಾಶವಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮಂಗಳವಾರ ರಾತ್ರಿಯಿಂದ ದಾಳಿ ಶುರುಮಾಡಿರುವ ಮಿಡತೆಗಳ ಹಿಂಡು ಜಿಲ್ಲೆಯಲ್ಲಿರುವ ಬಹುತೇಕ ತರಕಾರಿಯನ್ನು ನಾಶಪಡಿಸಿದೆ. ಇದೀಗ ಮಿಡತೆ ಹಿಂಡು ಸಾಗುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಇನ್ನು ಮಿಡತೆಗಳನ್ನು ನಿಯಂತ್ರಿಸಲು ಈಗಾಗಲೇ ಜಿಲ್ಲಾಡಳಿತ ಔಷಧ ಸಿಂಪಡಿಸಲು ಸೂಚನೆ ನೀಡಲಾಗಿದ್ದು, ಅಗ್ನಿಶಾಮಕ ದಳದ ಮೂಲಕ ಈ ಕಾರ್ಯ ನಡೆದಿದೆ. ಇದರೊಂದಿಗೆ ಗ್ರಾಮಸ್ಥರು ಮಿಡತೆಗಳು ಬಾರದಂತೆ ತಟ್ಟೆ, ಜಾಗಟೆಗಳ ಮೂಲಕ ಸದ್ದು ಮಾಡುತ್ತಿದ್ದಾರೆ. ಇನ್ನು ಕೆಲವರು ಪಟಾಕಿ ಹೊಡೆಯುವ ಮೂಲಕ ಓಡಿಸುವ ಪ್ರಯತ್ನ ಮಾಡಿದ್ದಾರೆ.
https://twitter.com/youngIndia91/status/1270971488582209536?ref_src=twsrc%5Etfw%7Ctwcamp%5Etweetembed%7Ctwterm%5E1270971488582209536&ref_url=https%3A%2F%2Fwww.news18.com%2Fnews%2Fbuzz%2Fwatch-a-kilometer-long-locust-swarm-reaches-prayagraj-terrifying-videos-surface-online-2664123.html