
ದೇಶಾದ್ಯಂತ ಮುಂಗಾರು ಚುರುಕುಗೊಂಡಿದ್ದು, ಇದರ ಪರಿಣಾಮ ಗುಜರಾತ್‌ನಲ್ಲಿ ಭಾರಿ ಮಳೆಯಾಗಿದೆ. ಇದರ ಪರಿಣಾಮ 30 ವರ್ಷದ ಸೇತುವೆ ಕೊಚ್ಚಿಕೊಂಡು ಹೋಗಿರುವ ಘಟನೆ ನಡೆದಿದೆ.
ಹೌದು, ಜುನಾಗಢ ಜಿಲ್ಲೆಯಲ್ಲಿರುವ 30 ವರ್ಷದ ಹಳೆಯ ಸೇತುವೆ ಮಳೆಯ ರಭಸಕ್ಕೆ ಬಿದ್ದಿರುವ ಘಟನೆ ನಡೆದಿದೆ. ಈ ಘಟನೆಯಲ್ಲಿ ಯಾವುದೇ ಪ್ರಾಣಾಪಾಯವಾಗಿಲ್ಲ ಎಂದು ವರದಿಯಾಗಿದೆ.
ಇನ್ನು ಗುಜರಾತ್ ನ ದ್ವಾರಕ ಜಿಲ್ಲೆಯಲ್ಲಿ ಖಾಂಭೂಲಿಯಾ ತಾಲೂಕಿನಲ್ಲಿ 487 ಮೀಮಿ ಮಳೆಯಾಗಿದೆ ಎಂದು ವರದಿಯಾಗಿದೆ. ಹವಾಮಾನ ಇಲಾಖೆಯ ಪ್ರಕಾರ ಮುಂದಿನ ಕೆಲ ದಿನಗಳ ಕಾಲ ಸೌರಾಷ್ಟ್ರ, ಉತ್ತರ ಹಾಗೂ ದಕ್ಷಿಣ ಗುಜರಾತ್ ನಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿದೆ ಎನ್ನಲಾಗಿದೆ.