alex Certify ಮೊಟ್ಟೆಯೊಡೆದು ಕಡಲು ಸೇರಿದ 1.48 ಕೋಟಿ ಆಮೆ ಮರಿಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊಟ್ಟೆಯೊಡೆದು ಕಡಲು ಸೇರಿದ 1.48 ಕೋಟಿ ಆಮೆ ಮರಿಗಳು

ಒಡಿಶಾದ ಗಹಿರ್‌ಮಾತಾ ಕಡಲತೀರದಲ್ಲಿ ಆಲಿವ್‌ ರಿಡ್ಲೆ ತಳಿಯ ಸುಮಾರು 1.48 ಕೋಟಿ ಆಮೆಗಳು ಕಾಣಿಸಿಕೊಂಡಿವೆ. ಮೇ 8ರಂದು ಈ ಆಮೆಗಳು ಕಂಡಿದ್ದು, ಪುಟ್ಟ ಆಮೆ ಮರಿಗಳು ತಮ್ಮ ತಾಯಿಂದಿರುವ ಇಲ್ಲದೇ ಇರುವ ವೇಳೆಯಲ್ಲಿ ಮೊಟ್ಟೆಯೊಡೆದುಕೊಂಡು ಹೊರಬಂದಿವೆ.

ಪ್ರಕೃತಿಯ ಈ ವಿಸ್ಮಯದ ಚಿತ್ರಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. “ಒಟ್ಟಾರೆಯಾಗಿ 1.48 ಕೋಟಿ ಆಮೆಗಳು ಮೊಟ್ಟೆಯೊಡೆದು ಬಂದಿದ್ದು, ಗಹಿರ್‌ಮಾತಾ ಕಡಲತೀರದಲ್ಲಿ ಸೇರಿಕೊಂಡು, ಈ ನಿರ್ಜನ ಕಡಲತೀರದಲ್ಲಿ ತಮ್ಮ ವಾರ್ಷಿಕ ಕ್ರಿಯೆಯೊಂದನ್ನು ಬೃಹತ್‌ ಸಂಖ್ಯೆಯಲ್ಲಿ ನೆರವೇರಿಸಿವೆ” ಎಂದು ಭಿಟರ್‌ಕಾಣಿಕಾ ಅಳಿವೆ ಅರಣ್ಯದ ವಿಭಾಗ ಅರಣ್ಯಾಧಿಕಾರಿ ಬಿಕಾಶ್‌ ರಂಜನ್ ದಾಶ್ ಸುದ್ದಿವಾಹಿನಿಗಳಿಗೆ ತಿಳಿಸಿದ್ದಾರೆ.

‘ನರೇಗಾ ಯೋಜನೆ’ ಕೂಲಿ ಕಾರ್ಮಿಕರಿಗೆ ಗುಡ್ ನ್ಯೂಸ್

ವೀಲರ‍್ಸ್‌ ದ್ವೀಪದ ಬಳಿ ಇರುವ ನಾಶಿ-2 ದ್ವೀಪದಲ್ಲಿ ಸುಮಾರು 2.98 ಲಕ್ಷ ಗೂಡುಗಳನ್ನು ಹೆಣ್ಣು ಆಮೆಗಳು ಕಟ್ಟಿದ್ದವು ಎಂದು ದಾಶ್ ತಿಳಿಸಿದ್ದಾರೆ. ಹೊಸದಾಗಿ ಜನಿಸಿದ ಈ ಮರಿಗಳ ಸುರಕ್ಷತೆಗೆಂದು 24/7 ಕಟ್ಟೆಚ್ಚರ ವಹಿಸಲಾಗಿದೆ ಎಂದು ಅರಣ್ಯಾಧಿಕಾರಿ ತಿಳಿಸಿದ್ದಾರೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...