alex Certify WAR BREAKING: ಯಾವ ಭಾರತೀಯರೂ ಒತ್ತೆಯಾಳಾಗಿಲ್ಲ; ರಷ್ಯಾ – ಉಕ್ರೇನ್ ಆರೋಪ – ಪ್ರತ್ಯಾರೋಪ ನಿರಾಕರಿಸಿದ ಭಾರತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

WAR BREAKING: ಯಾವ ಭಾರತೀಯರೂ ಒತ್ತೆಯಾಳಾಗಿಲ್ಲ; ರಷ್ಯಾ – ಉಕ್ರೇನ್ ಆರೋಪ – ಪ್ರತ್ಯಾರೋಪ ನಿರಾಕರಿಸಿದ ಭಾರತ

ಕೀವ್: ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ ಇನ್ನಷ್ಟು ತೀವ್ರಗೊಂಡಿರುವ ನಡುವೆಯೇ ರಷ್ಯಾ ಹಾಗೂ ಉಕ್ರೇನ್ ದೇಶಗಳು ಪರಸ್ಪರ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿವೆ. ಭಾರತೀಯರನ್ನು ರಷ್ಯಾ ಒತ್ತೆಯಾಳಾಗಿ ಇರಿಸಿಕೊಂಡಿದೆ ಎಂದು ಉಕ್ರೇನ್, ಉಕ್ರೇನ್ ಇಂತಹ ಕೃತ್ಯದಲ್ಲಿ ತೊಡಗಿದೆ ಎಂದು ರಷ್ಯಾ ವಿದೇಶಾಂಗ ಸಚಿವಾಲಯಗಳು ಆರೋಪಿಸಿವೆ.

ರಷ್ಯಾ ಹಾಗೂ ಉಕ್ರೇನ್ ಆರೋಪ-ಪ್ರತ್ಯಾರೋಪಗಳಿಗೆ ಪ್ರತಿಕ್ರಿಯಿಸಿರುವ ಭಾರತೀಯ ವಿದೇಶಾಂಗ ಸಚಿವಾಲಯ, ಯಾವುದೇ ಭಾರತೀಯರು ಒತ್ತೆಯಾಳಾಗಿಲ್ಲ. ಉಕ್ರೇನ್ ನಲ್ಲಿ ಇನ್ನೂ 10 ಸಾವಿರಕ್ಕೂ ಹೆಚ್ಚು ಭಾರತೀಯರು ಸಿಲುಕಿಕೊಂಡಿದ್ದಾರೆ. ಎಲ್ಲರನ್ನು ಸುರಕ್ಷಿತವಾಗಿ ಕರೆತರುವ ಕೆಲಸವಾಗುತ್ತಿದೆ ಎಂದು ತಿಳಿಸಿದೆ.

ಭಾರತೀಯರನ್ನು ರಷ್ಯಾ ಒತ್ತೆಯಾಳಾಗಿ ಇಟ್ಟುಕೊಂಡಿದೆ ಎಂದು ಉಕ್ರೇನ್ ಆರೋಪಿಸಿದ್ದರೆ, ಉಕ್ರೇನ್ ಸೇನೆ ಭಾರತೀಯರನ್ನು ಒತ್ತೆಯಾಳಾಗಿರಿಸಿಕೊಂಡು ಗುರಾಣಿಯಂತೆ ಬಳಸಿಕೊಳ್ಳುತ್ತಿದೆ ಎಂದು ರಷ್ಯಾ ಆರೋಪಿಸಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...