ಬದೌನ್(ಯುಪಿ): ತನಗೆ ಹುಟ್ಟುವ ಮಗು ಗಂಡು ಹೌದೋ ಅಲ್ಲವೋ ಎಂದು ತಿಳಿಯಲು ಪತಿ ತನ್ನ ಗರ್ಭಿಣಿ ಪತ್ನಿಯ ಹೊಟ್ಟೆ ಸೀಳಿದ ಭಯಾನಕ ಘಟನೆಗೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಬುಡಾಜ್ ಜಿಲ್ಲೆಯ ಸಿವಿಲ್ ಲೈನ್ ಪೊಲೀಸ್ ಠಾಣೆಯ ವ್ಯಾಪ್ತಿಗೆ ಸೇರಿದ ನೆಕ್‌ಪುರ್ ಎಂಬಲ್ಲಿ ಘಟನೆ ನಡೆದಿದೆ. ಗಂಭೀರವಾಗಿ ಗಾಯಗೊಂಡಿರುವ 35 ವರ್ಷದ ಗರ್ಭಿಣಿಯನ್ನು ಬರೇಲಿ ಆಸ್ಪತ್ರೆಗೆ ಸೇರಿಸಲಾಗಿದೆ. ಆರೋಪಿಯನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಪ್ರವೀಣ ಸಿಂಗ್ ಚೌಹಾಣ್ ತಿಳಿಸಿದ್ದಾರೆ.
ದಂಪತಿಗೆ ಈಗಾಗಲೇ ಐವರು ಹೆಣ್ಣು ಮಕ್ಕಳು. ಗಂಡು ಮಗು ಹುಟ್ಟಬೇಕು ಎಂಬುದು ಪತಿಯ ಆಸೆಯಾಗಿತ್ತು. ಆಕೆ ಏಳು ತಿಂಗಳ ಗರ್ಭಿಣಿಯಾಗಿದ್ದು, ಹೊಟ್ಟೆಯಲ್ಲಿ ಹೆಣ್ಣು ಮಗು ಇದೆಯೋ ಅಥವಾ ಗಂಡೋ ಎಂದು ನೋಡಲು ಚೂಪಾದ ವಸ್ತುವಿನಿಂದ ಹೊಟ್ಟೆ ಸೀಳಿದ್ದಾನೆ ಎಂದು ಮನೆಯವರು ಮಾಹಿತಿ ನೀಡಿದ್ದಾರೆ ಎಂದು ಪ್ರವೀಣ ಸಿಂಗ್ ಮಾಹಿತಿ ನೀಡಿದ್ದಾರೆ.