ಈ ರಕ್ಷಾ ಬಂಧನದಂದು ವೃಂದಾವನದಲ್ಲಿರುವ ಮಹಿಳೆಯರು ತಮ್ಮ ಮೆಚ್ಚಿನ ಮೋದಿ ಭಯ್ಯಾಗೆ ರಾಖಿ ಜೊತೆಗೆ ವಿಶೇಷ ಮಾಸ್ಕ್ ಗಳನ್ನು ಕಳುಹಿಸುವ ಮೂಲಕ, ಶುಭ ಹಾರೈಸಲಿದ್ದಾರೆ.
ಕೋವಿಡ್-19 ಸಾಂಕ್ರಮಿಕದ ಕಾರಣದಿಂದಾಗಿ, ಈ ಬಾರಿ ಈ ಮಹಿಳೆಯರು ವೈಯಕ್ತಿಕವಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಲು ಸಾಧ್ಯವಿಲ್ಲ. ಈ ಹಿಂದಿನ ವರ್ಷಗಳಲ್ಲಿ ವಿಶೇಷ ಕಾರ್ಯಕ್ರಮ ಮಾಡಿಕೊಂಡು ಅವರಿಗೆ ರಾಖಿ ಕಟ್ಟುತ್ತಿದ್ದರು. ಆದರೆ ಈ ಬಾರಿ ಮೋದಿ ಅವರ ಚಿತ್ರಗಳಿರುವ ಮಿಶೇಷ ಮಾಸ್ಕ್ಗಳನ್ನು ತಯಾರಿಸಿದ್ದು, ಅವುಗಳನ್ನು ಪ್ರಧಾನಿ ನಿವಾಸಕ್ಕೆ ಕಳುಹಿಸಿಕೊಡಲಾಗಿದೆ.
ಸುಲಭ್ ಅಂತಾರಾಷ್ಟ್ರೀಯ ಸಂಸ್ಥೆಯಡಿ, ವಿಧವೆಯರನ್ನು ಹಿಂದೂ ಧರ್ಮದ ಪೂಜಾ ವಿಧಿಗಳ ವೇಳೆ ತಾರತಮ್ಯದಿಂದ ನೋಡುವ ಪರಿಪಾಠಕ್ಕೆ ಅಂತ್ಯ ಹಾಡಲು ಹೊಸ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ವಿಧವೆ ಮಹಿಳೆಯರನ್ನು ವೈದಿಕ ಸಂಪ್ರದಾಯಗಳು ಹಾಗೂ ಹಬ್ಬಗಳ ಸಂದರ್ಭದಲ್ಲಿ ವಿಶೇಷ ಪೂಜೆಗಳಲ್ಲಿ ಒಳಗೊಳ್ಳಿಸಿಕೊಳ್ಳುತ್ತಾ ಬಂದಿದೆ ಸುಲಭ್ ಸಂಸ್ಥೆ.