ಒವೈಸಿ ಪಕ್ಷಕ್ಕೆ ಮತ ಹಾಕುವುದು ದೇಶದ್ರೋಹಿ ಕೆಲಸಕ್ಕೆ ಸಮ ಅಂತಾ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಗುಡುಗಿದ್ದಾರೆ.
ಹೈದಾರಾಬಾದ್ ನಲ್ಲಿ ಎಐಎಂಐಎಂ ಪಕ್ಷದ ವಿರುದ್ಧ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ, ಅಕ್ಬರುದ್ದೀನ್ ಹಾಗೂ ಒವೈಸಿ ಹೈದರಾಬಾದ್ ಅಭಿವೃದ್ಧಿ ಕಾಣೋದನ್ನ ಬಯಸುತ್ತಿಲ್ಲ. ಅಭಿವೃದ್ಧಿ ಬಗ್ಗೆ ಮಾತನಾಡುವ ಇವರು ಹೈದರಾಬಾದ್ನಲ್ಲಿ ಯಾಕೆ ಹೊಸ ಯೋಜನೆಗಳನ್ನ ಅನುಷ್ಠಾನ ಮಾಡಲು ಅವಕಾಶ ನೀಡುತ್ತಿಲ್ಲ.
ರೋಹಿಂಗ್ಯ ಮುಸ್ಲಿಮರ ಪರ ನಿಂತಿದ್ದು ಬಿಟ್ಟರೆ ಇವರು ಮತ್ಯಾವ ಕೆಲಸವನ್ನೂ ಮಾಡುತ್ತಿಲ್ಲ. ಹೀಗಾಗಿ ಇವರಿಗೆ ದೇಶದ ಅಭಿವೃದ್ಧಿ ಬಗ್ಗೆ ಮಾತನಾಡುವ ಹಕ್ಕಿಲ್ಲ. ಒವೈಸಿ ಪರ ಚಲಾಯಿಸುವ ಪ್ರತಿಯೊಂದು ಮತವೂ ದೇಶದ ವಿರುದ್ಧ ಮಾಡುವ ಕೆಲಸವಾಗಿದೆ ಅಂತಾ ಹೇಳಿದ್ದಾರೆ.