ಅಗರಬತ್ತಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ ವಿಕಲಾಂಗ ದಂಪತಿಗೆ ತಾವು ಕೂಡಿಟ್ಟ ಹಣ ರದ್ದಿ ಎಂಬುದು ಗೊತ್ತಾಗ್ತಿದ್ದಂತೆ ದಂಗಾಗಿದ್ದಾರೆ. ತಮಿಳುನಾಡಿನ ಈ ದಂಪತಿಗೆ ಕಣ್ಣು ಕಾಣುವುದಿಲ್ಲ. ಅಗರಬತ್ತಿ ಮಾಡಿ ಜೀವನ ನಡೆಸುತ್ತಿದ್ದಾರೆ. ನೋಟು ನಿಷೇಧವಾಗಿ ನಾಲ್ಕು ವರ್ಷದ ನಂತ್ರ ಹಳೆ ನೋಟು ಹಿಡಿದು ಬ್ಯಾಂಕ್ ಗೆ ಬಂದಿದ್ದಾರೆ.
58 ವರ್ಷದ ಸೋಮು ಬ್ಯಾಂಕ್ ಗೆ ಬಂದಿದ್ದಾನೆ. ಸೋಮು ಹಣವನ್ನು ಪತ್ನಿಗೆ ನೀಡ್ತಿದ್ದನಂತೆ. ಆಕೆ ಹಣವನ್ನು 500, 1000 ನೋಟುಗಳಾಗಿ ಬದಲಾಯಿಸಿ ಅದನ್ನು ಮನೆಯಲ್ಲಿ ಇಡ್ತಿದ್ದಳಂತೆ. 2016ರಲ್ಲಿ 500 ಹಾಗೂ 1000 ರೂಪಾಯಿ ನೋಟು ಬ್ಯಾನ್ ಆಗಿದೆ ಎಂಬುದು ಆಕೆಗೆ ಗೊತ್ತಿರಲಿಲ್ಲ.
ಲಾಕ್ ಡೌನ್ ವೇಳೆ ಕೆಲಸ ನಿಲ್ಲಿಸಿದ್ದ ಜೋಡಿ, ಅನ್ ಲಾಕ್ ನಲ್ಲಿ ಕೂಡಿಟ್ಟ 24000 ರೂಪಾಯಿಯನ್ನು ಬ್ಯಾಂಕ್ ಗೆ ಜಮಾ ಮಾಡಲು ಬಂದಿದ್ದಾರೆ. ಆಗ ಹಣ ರದ್ದಾಗಿರುವುದು ಗೊತ್ತಾಗಿ ದಂಗಾಗಿದ್ದಾರೆ. ಅವ್ರ ನೆರವಿಗೆ ಬರುವಂತೆ ತಮಿಳುನಾಡು ಸಿಎಂಗೆ ಮನವಿ ಮಾಡಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.