alex Certify ನಗು ತರಿಸುತ್ತೆ ಶಿಕ್ಷಕಿಯಿಂದ ಎಲಾನ್‌ ಮಸ್ಕ್‌ ಹೆಸರಿನ ಉಚ್ಚಾರಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಗು ತರಿಸುತ್ತೆ ಶಿಕ್ಷಕಿಯಿಂದ ಎಲಾನ್‌ ಮಸ್ಕ್‌ ಹೆಸರಿನ ಉಚ್ಚಾರಣೆ

ನೆಟ್ಟಿಗರ ಪಾಲಿನ ಫೇವರಿಟ್ ಸರ್ಚ್‌ಗಳಲ್ಲಿ ಒಬ್ಬರಾದ ಟೆಸ್ಲಾ ಸಿಇಓ ಎಲಾನ್ ಮಸ್ಕ್ ಸುದ್ದಿ ಎಲ್ಲಾ ಕಡೆ ಸದ್ದು ಮಾಡುತ್ತಿದೆ. ಆತನ ಕಂಪನಿ, ಸ್ಪೇಸ್‌ಎಕ್ಸ್‌, ಆತನ ಪುಟಾಣಿ ಮಗನಿಗೆ ಇಟ್ಟಿರುವ ತಾಂತ್ರಿಕ ಹೆಸರು ಸೇರಿದಂತೆ ಆತ ಏನೇ ಮಾಡಿದರೂ ಸುದ್ದಿಯೋ ಸುದ್ದಿ.

ಆತನ ಪುತ್ರನ ಹೆಸರಾದ ‘X Æ A-Xii’ಅನ್ನು ಜನರ ಉಚ್ಛರಿಸಲು ಪರದಾಡುತ್ತಿದ್ದಾರೆ. ಇದೇ ವೇಳೆ ಖುದ್ದು ಮಸ್ಕ್‌ರ ಹೆಸರನ್ನು ಸಹ ಓದುವಲ್ಲಿ ತಪ್ಪು ಮಾಡಿದ ಶಿಕ್ಷಕಿಯೊಬ್ಬರ ವಿಡಿಯೋವನ್ನು ’ಮಿಸಸ್ ರಾಜೇಶ್ವರಿ’ ಎಂಬ ಇನ್‌ಸ್ಟಾಗ್ರಾಂ ಬಳಕೆದಾರರೊಬ್ಬರು ಹಂಚಿಕೊಂಡಿದ್ದಾರೆ.

ಯುಎಎನ್ ಸಂಖ್ಯೆ ಇಲ್ಲದೆ ಪಿಎಫ್ ಬಾಕಿ ನೋಡುವುದು ಹೇಗೆ…? ಇಲ್ಲಿದೆ ಮಾಹಿತಿ

ವೈರಲ್ ಆಗಿರುವ ಈ ವಿಡಿಯೋದಲ್ಲಿ ಕಪ್ಪುಹಲಗೆ ಮೇಲೆ ಮಸ್ಕ್ ಹೆಸರಿನಲ್ಲಿರುವ ಅಕ್ಷರಗಳನ್ನು ಬರೆಯುವ ಈ ಶಿಕ್ಷಕಿ ಕೊನೆಗೆ ಆತನ ಹೆಸರನ್ನು ’ಮಸ್ಕ್ ಮೆಲನ್’ ಎಂದು ಓದಿದ್ದಾರೆ…..! ’ಕರ್ಬೂಜ’ ಹಣ್ಣಿಗೆ ಇಂಗ್ಲಿಷ್‌ನಲ್ಲಿ ಮಸ್ಕ್ ಮೆಲನ್ ಎನ್ನುತ್ತಾರೆ ಎಂದು ಸಹ ಶಿಕ್ಷಕಿ ಇದೇ ವೇಳೆ ಹೇಳುವುದನ್ನ ನೋಡಬಹುದಾಗಿದೆ.

https://www.instagram.com/p/CMb0V1JAGUG/?utm_source=ig_web_copy_link

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...