ರಾಜಕೋಟ್: ರಾಜಸ್ಥಾನದ ರಾಜಕೋಟ್ ನಲ್ಲಿ ಉತ್ತರಾಯಣ-2021 ಹಬ್ಬದ ಮಾರುಕಟ್ಟೆ ವ್ಯಾಪಾರ ಜೋರಾಗಿ ನಡೆದಿದೆ. ಅಪರೂಪದ ಸಂದೇಶ ಗಣ್ಯರ ಫೋಟೋಗಳಿರುವ ಗಾಳಿಪಟಗಳು ಗಮನ ಸೆಳೆಯುತ್ತಿವೆ.
ಕೋವಿಡ್ -19 ಮುಂಜಾಗೃತಾ ಕ್ರಮವಾಗಿ ಮಾಸ್ಕ್ ಧರಿಸಿ ಎಂಬ ಸಂದೇಶ. ಮೋದಿ ಹೇ ತೋ ಮುಮ್ಕಿನ್ ಹೇ ಭಾಯ್ ಎಂಬ ಸಂದೇಶಗಳುಳ್ಳ ಗಾಳಿಪಟಗಳು ಬಂದಿವೆ. ಒಟ್ಟು 1500 ಮಾದರಿಯ ಗಾಳಿಪಟಗಳು ಮಾರುಕಟ್ಟೆಯಲ್ಲಿ ಪ್ರಸಿದ್ಧವಾಗಿವೆ.
ಪ್ರತಿ ವರ್ಷ ಮೋದಿ ಫೋಟೋ ಇರುವ ಗಾಳಿಪಟಕ್ಕೆ ಭಾರಿ ಬೇಡಿಕೆ ಇರುತ್ತದೆ. ಈ ವರ್ಷ ಕ್ರಿಕೆಟರ್ ವಿರಾಟ್ ಕೊಹ್ಲಿ, ನಟಿ ಅನುಷ್ಕಾ ಶರ್ಮಾರ ಫೋಟೋವಿರುವ ಗಾಳಿಪಟವೂ ಬಂದಿದೆ ಎನ್ನುತ್ತಾರೆ ವ್ಯಾಪಾರಸ್ಥ ರಜನಿ ಪಟೇಲ್.
