alex Certify ಹೇಗೆ ತರಬೇತಿ ನೀಡ್ತಿದ್ದಾರೆ ಗೊತ್ತಾ ಈ ಎಎಸ್‌ಐ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೇಗೆ ತರಬೇತಿ ನೀಡ್ತಿದ್ದಾರೆ ಗೊತ್ತಾ ಈ ಎಎಸ್‌ಐ…!

ಕೆಲ ದಿನಗಳಿಂದ ಪೊಲೀಸ್‌ ಅಧಿಕಾರಿಯೊಬ್ಬರು ತಮ್ಮ ಕೆಳ ಹಂತದ ಸಿಬ್ಬಂದಿಗಳಿಗೆ ಡ್ರಿಲ್ಲಿಂಗ್‌ ತರಬೇತಿ ನೀಡುತ್ತಿರುವ ವಿಡಿಯೊ ವೈರಲ್‌ ಆಗಿತ್ತು. ಅದರಲ್ಲಿ ಆತ ಹೇಳಿಕೊಡುತ್ತಿರುವ ರೀತಿಗೆ ಅನೇಕರು ಫಿದಾ ಆಗಿದ್ದರು. ಇದೀಗ ಆ ಸಿಬ್ಬಂದಿ ಯಾರೆಂದು ತಿಳಿದುಬಂದಿದೆ.

ಹೌದು ಹಾಡು ಹೇಳಿಕೊಂಡು, ಸಿಬ್ಬಂದಿಗಳು ಪಥ ಸಂಚಲನ ಮಾಡಿದ ರೀತಿಯಲ್ಲಿ ತಾವು ಓಡಾಡಿಕೊಂಡು ಹೋಗುತ್ತಿರುವ ವಿಡಿಯೊ ವೈರಲ್‌ ಆಗಿತ್ತು. ಈ ಪೊಲೀಸ್‌ ಅಧಿಕಾರಿ ತೆಲಂಗಾಣ ಮೂಲದವರು ಎಂದು ತಿಳಿದುಬಂದಿದ್ದು, ಇವರ ಹೆಸರು ಮೊಹಮ್ಮದ್‌ ರಫಿ ಎನ್ನಲಾಗಿದೆ.

ತೆಲಂಗಾಣದಲ್ಲಿ ಅಸಿಸ್ಟೆಂಟ್‌ ಸಬ್‌ ಇನ್ಸ್‌ಪೆಕ್ಟರ್‌ ಆಗಿ ಕಾರ್ಯನಿರ್ವಹಿಸುತ್ತಿರುವ ರಫಿ, ನೂತನವಾಗಿ ಕೆಲಸಕ್ಕೆ ಸೇರಿರುವ ಸಿಬ್ಬಂದಿಗಳಿಗೆ ಡ್ರಿಲ್‌ ತರಬೇತಿ ನೀಡುತ್ತಿದ್ದು, ಈ ವೇಳೆ ಅವರು ತಮ್ಮ ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ರೀತಿಗೆ ನೆಟ್ಟಿಗರು ಶಹಬಾಸ್‌ಗಿರಿ ನೀಡಿದ್ದಾರೆ. ಕೆಲಸದ ಅವಧಿಯಲ್ಲಿ 1970ರ ಹುಂಜೋಲಿ ಚಿತ್ರದ ದಾಲ್‌ ಗಯಾ ದಿನ್‌ ಎನ್ನುವ ಹಾಡನ್ನು ಹಾಡುತ್ತಿರುವುದು ಇದೀಗ ವೈರಲ್‌ ಆಗಿದೆ.

ಐಪಿಎಸ್‌ ಅಸೋಸಿಯೇಷನ್‌ ಈ ವಿಡಿಯೊವನ್ನು ಶೇರ್‌ ಮಾಡಿದ್ದು, ಸುಮಾರು 3000 ಸಾವಿರ ಮಂದಿ ಲೈಕ್‌ ಮಾಡಿ, 600ಕ್ಕೂ ಹೆಚ್ಚು ಮಂದಿ ಕಾಮೆಂಟ್‌ ಮಾಡಿದ್ದಾರೆ. ಎಎಸ್‌ಐ ಅವರ ಈ ಕರ್ತವ್ಯ ನಿಷ್ಠೆಯನ್ನು ನೆಟ್ಟಿಗರು ಮುಕ್ತಕಂಠದಿಂದ ಹೊಗಳುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...