ಯಾರ್ಯಾರ ನಡುವೆ ಸ್ನೇಹ ಬೆಳೆಯುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಅದರಲ್ಲೂ ಪ್ರಾಣಿಗಳು ತಮ್ಮ ಸಮೀಪ ಇದ್ದ ಇನ್ನೊಂದು ಪ್ರಾಣಿಯ ಜತೆ ಸ್ನೇಹ ಬೆಳೆಸುತ್ತವೆ. ಪರಸ್ಪರ ದ್ವೇಷಿಗಳು ಎಂದು ನಾವು ನಂಬಿದ ಬೆಕ್ಕು -ನಾಯಿ, ಹುಲಿ-ಆಡು, ಹಾವು -ಇಲಿಗಳು ಸ್ನೇಹದಿಂದಿರುವ ಕೆಲವು ವಿಡಿಯೋಗಳನ್ನು ನಾವು ನೋಡಿದ್ದೇವೆ. ಟ್ವಿಟರ್ ನಲ್ಲಿ ಅಪ್‌ಲೋಡ್ ಆದ ಅಪರೂಪದ ವಿಡಿಯೋವೊಂದು ಸ್ನೇಹದ ಮಹತ್ವ ಸಾರುವಂತಿದೆ.
ನೀರಲ್ಲಿ ಅತಿ ಶಾಂತವಾಗಿ, ನಿಧಾನವಾಗಿ ಓಡಾಡಿಕೊಂಡಿರುವ ಆಮೆ ಹಾಗೂ ಸದಾ ಚುರುಕಾಗಿರುವ ನಾಯಿ ಸ್ನೇಹದಿಂದ ಫುಟ್ಬಾಲ್ ಆಡುವ 43 ಸೆಕೆಂಡ್ ಗಳ ವಿಡಿಯೋವು @gnuman1979 ಎಂಬ ಟ್ವಿಟರ್ ಖಾತೆಯಲ್ಲಿ ಅಪ್ ಲೋಡ್ ಆಗಿದೆ. ವಿಡಿಯೋವನ್ನು 172.4 ಸಾವಿರ ಜನ ವೀಕ್ಷಿಸಿದ್ದಾರೆ. ಸಾಕಷ್ಟು ಲೈಕ್, ಕಮೆಂಟ್ ಗಳು ಬಂದಿವೆ.
ವಿಡಿಯೋದಲ್ಲಿ ಆಮೆ ಫುಟ್ ಬಾಲ್ ಅನ್ನು ವೇಗವಾಗಿ ಹೋಗಿ ಹಿಡಿಯುತ್ತದೆ. ನಾಯಿಯ ಜತೆ ಸ್ಪರ್ಧೆ ಮಾಡುತ್ತದೆ. “ಆಮೆ ಫುಟ್ಬಾಲ್ ಆಡುವುದನ್ನು ಇದೇ ಮೊದಲ ಬಾರಿ ನೋಡಿದೆ” ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. “ಆಮೆ ಓಡುತ್ತಿದೆ” ಎಂದು ಇನ್ನೊಬ್ಬರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
https://twitter.com/MonaSigal/status/1308930003585978368?ref_src=twsrc%5Etfw%7Ctwcamp%5Etweetembed%7Ctwterm%5E1309136400609161216%7Ctwgr%5Eshare_3&ref_url=https%3A%2F%2Fwww.indiatoday.in%2Ftrending-news%2Fstory%2Fviral-video-of-turtle-playing-with-pup-and-running-after-ball-has-twitter-amazed-1725253-2020-09-25