
ನವದೆಹಲಿ: ನವ ವಧುವನ್ನು ಮನೆ ತುಂಬಿಸಿಕೊಳ್ಳುವಂತೆ ನಾಯಿ ಮರಿಗೆ ಆರತಿ ಮಾಡಿ ಮನೆ ತುಂಬಿಸಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ವೈರಲ್ ಆಗಿದೆ.
ಅನಿವಾಸಿ ಭಾರತೀಯರು ಮಾಡಿದ ಈ ವಿಡಿಯೋ ಭಾರತದಲ್ಲಿ ಸಾಕಷ್ಟು ಚರ್ಚೆ ಹುಟ್ಟು ಹಾಕಿದೆ. ಮೂಲತಃ ಟಿಕ್ ಟಾಕ್ ನಲ್ಲಿ ವಿಡಿಯೋ ಅಪ್ ಲೋಡ್ ಆಗಿದ್ದು, 24 ಗಂಟೆಯಲ್ಲಿ 5 ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದಿದೆ.
ವಿಡಿಯೋದಲ್ಲಿ ಮುದ್ದಾದ ಬಿಳಿ ನಾಯಿ ಮರಿಯನ್ನು ಒಬ್ಬ ಯುವತಿ ಬಾಗಿಲಲ್ಲಿ ತಂದು ಎತ್ತಿಕೊಂಡಿದ್ದರೆ ಇನ್ನೊಬ್ಬ ಯುವತಿ ನಾಯಿಗೆ ಆರತಿ ಎತ್ತುತ್ತಾಳೆ. ಒಂದು ಬಟ್ಟಲಲ್ಲಿ ಕೆಂಬಣ್ಣದ ನೀರು ತುಂಬಿಕೊಂಡು ಅದರಲ್ಲಿ ನಾಯಿಯ ಕಾಲುಗಳನ್ನು ಅದ್ದಿ ಬಿಳಿ ಹಾಳೆಯ ಮೇಲೆ ಅದರ ಕಾಲಿನ ಮುದ್ರೆ ಇಡುತ್ತಾಳೆ.
ಹಿಂದು ವಿವಾಹಗಳಲ್ಲಿ ವಧುವನ್ನು ಮನೆ ತುಂಬಿಸಿಕೊಳ್ಳುವ ಗೃಹ ಪ್ರವೇಶದ ಈ ಪದ್ಧತಿಯನ್ನು ನಾಯಿಗಳಿಗೆ ಮಾಡಿದ ಬಗ್ಗೆ ವ್ಯಾಪಕವಾಗಿ ಚರ್ಚಿಸಿದ್ದಾರೆ. ಹಿಂದಿನ ವರ್ಷಗಳ ಘಟನೆಯನ್ನು ಹಲವರು ನೆನಪಿಸಿದ್ದಾರೆ.
https://twitter.com/sopranoxs/status/1305804840182796289?ref_src=twsrc%5Etfw%7Ctwcamp%5Etweetembed%7Ctwterm%5E1305804840182796289%7Ctwgr%5Eshare_3&ref_url=https%3A%2F%2Fwww.news18.com%2Fnews%2Fbuzz%2Fviral-video-of-nri-puppys-aarti-and-grihapravesh-triggers-debate-about-brahmanical-casteism-2880957.html