ಸಪ್ತಪದಿ ತುಳಿಯುವ ವೇಳೆ ವಧು – ವರ ನೃತ್ಯ ಮಾಡಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಟ್ವಿಟರ್ನಲ್ಲಿ ಈ ವಿಡಿಯೋವನ್ನ ಬಿರ್ಲಾ ಕಂಪನಿಯ ಚೇರ್ಮನ್ ಹಾಗೂ ಎಂಡಿ ವೇದಾಂತ್ ಬಿರ್ಲಾ ಶೇರ್ ಮಾಡಿದ್ದಾರೆ.
ಮದುವೆ ಶಾಸ್ತ್ರ ನಡೆಯುತ್ತಿರುವ ವೇಳೆ ವಧು ಹಾಗೂ ವರ ಅಗ್ನಿಕುಂಡದ ಸುತ್ತ ಹೆಜ್ಜೆ ಹಾಕಲು ಮುಂದಾಗಿದ್ದಾರೆ. ಇದು ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರವಾದ ಕ್ರಮವಾಗಿದೆ. ಈ ವಿಡಿಯೋದಲ್ಲಿ ವಧು – ವರರು ನೃತ್ಯ ಮಾಡ್ತಾ ಅಗ್ನಿಕುಂಡದ ಸುತ್ತ ಸುತ್ತುವ ಮೂಲಕ ಈ ಶಾಸ್ತ್ರವನ್ನ ಎಂಜಾಯ್ ಮಾಡಿದ್ದಾರೆ.
ಆದರೆ ವಧು – ವರರ ಈ ನಡೆಯನ್ನ ವೇದಾಂತ್ ಖಂಡಿಸಿದ್ದಾರೆ. ಇದು ಮದುವೆಯೋ ಇಲ್ಲವೇ ನಮ್ಮ ಶಾಸ್ತ್ರಗಳನ್ನ ತ್ಯಾಗ ಮಾಡಿದ್ದೀರೋ ಎಂದು ಕೇಳಿದ್ದಾರೆ. ನೀವು ಈ ವಿಶ್ವದಲ್ಲಿ ನೀವು ಏನಾದರೂ ಆಗಿದ್ದೀರಾ ಅಂದರೆ ಅದು ನಮ್ಮ ಸಂಸ್ಕೃತಿ ಹಾಗೂ ಮೌಲ್ಯದಿಂದ ಎಂದು ಬರೆದುಕೊಂಡಿದ್ದಾರೆ.
ಈ ವಿಡಿಯೋ ಸಖತ್ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ 4.2 ಲಕ್ಷಕ್ಕೂ ಹೆಚ್ಚು ವೀವ್ಸ್ ಸಂಪಾದಿಸಿದೆ. ವಧು – ವರರ ಈ ಎಂಜಾಯ್ಮೆಂಟ್ನ್ನು ಕೆಲ ನೆಟ್ಟಿಗರು ಖಂಡಿಸಿದ್ದಾರೆ. ಇನ್ನು ಕೆಲವರು ಅವರು ಮದುವೆಯನ್ನ ಎಂಜಾಯ್ ಮಾಡ್ತಿದ್ದಾರೆ. ಇದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ.
https://twitter.com/i/status/1366771588910092288