ಒಡಹುಟ್ಟಿದವರೊಂದಿಗೆ ಆಡಿ ಬೆಳೆಯುವ ಸಂದರ್ಭದಲ್ಲಿ ಸಾಕಷ್ಟು ಸ್ಮರಣೀಯ ಕ್ಷಣಗಳು ಹುಟ್ಟಿಕೊಳ್ಳುತ್ತವೆ. ಒಡಹುಟ್ಟಿದವರಲ್ಲಿ ಎಷ್ಟೇ ಕಚ್ಚಾಟ ನಡೆದರೂ ಸಹ ಒಬ್ಬರನ್ನೊಬ್ಬರು ಪ್ರೀತಿ ಮಾಡುತ್ತಾರೆ ಎಂಬುದರಲ್ಲಿ ಅನುಮಾನವಿಲ್ಲ.
ಇಂಥದ್ದೇ ನಿದರ್ಶನ ನೆನಪಿಸುವ ಘಟನೆಯ 13 ಸೆಕೆಂಡ್ಗಳ ವಿಡಿಯೋವೊಂದನ್ನು ಭಾರತೀಯ ಅರಣ್ಯ ಸೇವಾ ಅಧಿಕಾರಿ ಸುಶಾಂತಾ ನಂದಾ ಹಂಚಿಕೊಂಡಿದ್ದಾರೆ.
ಒಡಹುಟ್ಟಿದ ಪುಟಾಣಿ ಪಾಂಡಾಗಳು ಒಂದಕ್ಕೊಂದು ಚೇಷ್ಟೆ ಮಾಡಿಕೊಂಡು ಆಟವಾಡುತ್ತಿರುವ ವಿಡಿಯೋ ಹಾಕಿರುವ ನಂದಾ, “ಒಡಹುಟ್ಟಿದವರು…… ಮಾನವರಿಗಿಂತ ಭಿನ್ನವಾಗೇನೂ ಇಲ್ಲ. ಕಿರಿ ಮರಿಯು ಹಿರಿ ಮರಿಯೆಡೆಗೆ ಬಲೇ ಉತ್ಸಾಹದಿಂದ ನುಗ್ಗುತ್ತಿರುವುದನ್ನು ಕಂಡರೆ, ನಮ್ಮ ಬಾಲ್ಯದ ದಿನಗಳು ನೆನಪಾಗುವುದರಲ್ಲಿ ಯಾವುದೇ ಸಂಶಯವಿಲ್ಲ” ಎಂದು ವಿಡಿಯೋಗೆ ಕ್ಯಾಪ್ಷನ್ ಹಾಕಿದ್ದಾರೆ.