ಸ್ವಾತಂತ್ರ್ಯೋತ್ಸದ ಪ್ರಯುಕ್ತ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿರುವ ಉದ್ಯಮಿ ಆನಂದ್ ಮಹಿಂದ್ರಾ, ಪುಟಾಣಿ ಬಾಲನೊಬ್ಬದ ದೇಶಭಕ್ತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅರುಣಾಚಲ ಪ್ರದೇಶದ ಮಗುವೊಂದು ಬಹಳ ರಾಷ್ಟ್ರಭಕ್ತಿಯಿಂದ ರಾಷ್ಟ್ರಗೀತೆ ಹಾಡುತ್ತಿರುವುದನ್ನು ಈ ವಿಡಿಯೋದಲ್ಲಿ ನೋಡಬಹದಾಗಿದೆ.
“ನಾನು ಈ ವಿಡಿಯೋವನ್ನು ವರ್ಷದ ಹಿಂದೆ ಮೊದಲ ಬಾರಿಗೆ ನೋಡಿದ್ದೆನು. ನಾನು ಇದನ್ನು ಸ್ಟೋರ್ ಮಾಡಿಕೊಂಡು ಪ್ರತಿವರ್ಷವೂ ನೋಡಿಕೊಂಡು ನನ್ನ ಜೋಶ್ ಏರಿಸಿಕೊಳ್ಳುತ್ತೇನೆ. ನಮ್ಮ ರಾಷ್ಟ್ರಗೀತೆಯನ್ನು ಹೇಳುವ ಬೆಸ್ಟ್ ರೀತಿ ಇದು ಎಂದು ನನಗೆ ಬಹಳ ಬಲವಾಗಿ ಅನಿಸುತ್ತದೆ. ಆತನ ಮುಗ್ಧತೆ ಹಾಗೂ ಗಮನ ನನ್ನನ್ನು ಯಾವಾಗಲೂ ಸೆಳೆಯುತ್ತದೆ,” ಎಂದು ಮಹೀಂದ್ರಾ ಈ ಪೋಸ್ಟ್ನಲ್ಲಿ ಹೇಳಿಕೊಂಡಿದ್ದಾರೆ.