ತನ್ನ ದ್ವಿಚಕ್ರ ವಾಹನ ತಡೆದಿದ್ದಕ್ಕಾಗಿ ಮಹಿಳೆಯೊಬ್ಬಳು ಸಂಚಾರಿ ಠಾಣೆ ಪೊಲೀಸ್ ಕಾನ್ಸ್ಸ್ಟೇಬಲ್ ಮೇಲೆ ಹಲ್ಲೆ ನಡೆಸಿದ್ರೂ ಸಹ ಅಧಿಕಾರಿ ಪ್ರದರ್ಶಿಸಿದ ತಾಳ್ಮೆಯನ್ನ ಕಂಡು ಅವರಿಗೆ ಸನ್ಮಾನಿಸಲಾಗಿದೆ .
ಮೂರು ದಿನಗಳ ಹಿಂದೆ ಮುಂಬೈನಲ್ಲಿ ಮಹಿಳೆಯೊಬ್ಬಳು ತನ್ನ ದ್ವಿಚಕ್ರವಾಹವನ್ನ ತಡೆದಿದ್ದಾರೆ ಎಂಬ ಕಾರಣಕ್ಕೆ ಸಂಚಾರಿ ಠಾಣೆ ಕಾನ್ಸ್ಸ್ಟೇಬಲ್ ಶ್ರೀ ಪಾರ್ಥೆ ಎಂಬವರನ್ನ ಥಳಿಸಿದ್ದು ಮಾತ್ರವಲ್ಲದೇ ಅವಾಚ್ಯ ಶಬ್ದಗಳಿಂದ ನಿಂದಿಸಿದ್ರು. ಮಹಿಳೆ ಅಷ್ಟೊಂದು ಕೆಟ್ಟದಾಗಿ ವರ್ತಿಸಿದ್ರೂ ಸಹ ತಾಳ್ಮೆ ಕಳೆದುಕೊಳ್ಳದ ಸಂಚಾರಿ ಠಾಣೆ ಪೇದೆ ತಮ್ಮ ಕರ್ತವ್ಯ ನಿರ್ವಹಿಸಿದ್ರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು.
ತಾಳ್ಮೆ ಪ್ರದರ್ಶಿಸಿದ ಸಂಚಾರಿ ಠಾಣೆ ಪೇದೆ ಕರ್ತವ್ಯನಿಷ್ಠೆಗೆ ಮೆಚ್ಚಿದ ಮಹಾರಾಷ್ಟ್ರ ಡೈರೆಕ್ಟರೇಟ್ ಜನರಲ್ ಆಫ್ ಇನ್ಫರ್ಮೇಷನ್ & ಪಬ್ಲಿಕ್ ರಿಲೇಶನ್ಸ್ ದಯಾನಂದ್ ಕಾಂಬ್ಳೆ, ಕೊಲಾಬಾ ಎಸಿಪಿ ಲಯಾ ಧೋಂಡೆ ಹೂಗುಚ್ಚ ನೀಡಿ ಸನ್ಮಾನಿಸಿದ್ದಾರೆ.
https://twitter.com/madhuriketa/status/1321673717689143297?ref_src=twsrc%5Etfw%7Ctwcamp%5Etweetembed%7Ctwterm%5E1321673717689143297%7Ctwgr%5Eshare_3&ref_url=https%3A%2F%2Findianexpress.com%2Farticle%2Ftrending%2Ftrending-in-india%2Fmumbai-acp-felicitates-traffic-cop-for-his-conduct-after-womans-assaults-6908471%2F