2017ರ ಡಿಸೆಂಬರ್ ತಿಂಗಳಿನಲ್ಲಿ ತಮಿಳುನಾಡಿನ ಅರಣ್ಯ ಇಲಾಖೆ ಸಿಬ್ಬಂದಿಯೊಬ್ಬರು ಮೆಟ್ಟುಪಾಳಯಂ ಕಾಡಿನ ಕಾಲುವೆಯೊಂದರಲ್ಲಿ ಬಿದ್ದಿದ್ದ ಆನೆ ಮರಿಯೊಂದನ್ನ ರಕ್ಷಣೆ ಮಾಡಿದ್ದಾರೆ. ಆನೆ ಮರಿಯನ್ನ ಹೆಗಲ ಮೇಲೆ ಹೊತ್ತುಕೊಂಡು ಬಂದು ತಾಯಿ ಆನೆಯ ಮಡಿಲಿಗೆ ಸೇರಿಸಿದ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡಿತ್ತು.
ಪಳನಿಚಾಮಿ ಶರತ್ಕುಮಾರ್ ಎಂಬವರು ಈ ರಕ್ಷಣಾ ಕಾರ್ಯವನ್ನ ಮಾಡಿದ್ದರು.ಈ ಘಟನೆಯ ಬಳಿಕ ಶರತ್ ಕುಮಾರ್ಗೆ ನೆಟ್ಟಿಗರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಕಳೆದ ವರ್ಷ ಈ ಫೋಟೋವನ್ನ ಐಎಫ್ಎಸ್ ಅಧಿಕಾರಿ ದೀಪಿಕಾ ಬಾಜಪೇಯಿ ಇನ್ನೊಮ್ಮೆ ಶೇರ್ ಮಾಡಿದ್ದರು.
ಹಳೆಯ ಫೋಟೋ. ತಮಿಳುನಾಡಿನಲ್ಲಿ ಆನೆಯ ಮರಿಯನ್ನ ಅರಣ್ಯ ಸಿಬ್ಬಂದಿ ರಕ್ಷಣೆ ಮಾಡಿದ್ದ ವಿಡಿಯೋ ಭಾರೀ ಸುದ್ದಿ ಮಾಡಿತ್ತು. ಪಳನಿಚಾಮಿ ತಮ್ಮ ಹೆಗಲ ಮೇಲೆ ಆನೆಮರಿಯನ್ನ ಹೊತ್ತು ತಾಯಿಯ ಮಡಿಲಿಗೆ ಸೇರಿಸಿದ್ದರು ಎಂದು ಟ್ವೀಟಾಯಿಸಿದ್ದರು.
ಇದೀಗ ಈ ವಿಡಿಯೋವನ್ನ ಐಎಫ್ಎಸ್ ಅಧಿಕಾರಿ ಸುಸಾಂತಾ ನಂದಾ ಮತ್ತೊಮ್ಮೆ ಶೇರ್ ಮಾಡಿದ್ದು ಈ ಮೂಲಕ ವಿಡಿಯೋ ಮತ್ತೆ ಸುದ್ದಿ ಮಾಡಿದೆ. ಕಾಲುವೆಯಲ್ಲಿ ಬಿದ್ದಿದ್ದ ಆನೆಮರಿ ಮಣ್ಣಿನ ರಾಶಿಯಲ್ಲಿ ಸಿಕ್ಕಿಕೊಂಡಿತ್ತು. ಪಳನಿಚಾಮಿ ಶರತ್ಕುಮಾರ್ ಆನೆ ಮರಿಯನ್ನ ಆನೆಗಳ ಹಿಂಡಿಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಟ್ವೀಟಾಯಿಸಿದ್ರು. ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಮತ್ತೊಮ್ಮೆ ಸುದ್ದಿಯಾಗಿದೆ.
https://twitter.com/i/status/1378721995764850699