ಚಿತ್ರ-ವಿಚಿತ್ರ ಪ್ರಯೋಗ ಮಾಡುವುದ್ರಲ್ಲಿ ಭಾರತೀಯರು ಮುಂದಿದ್ದಾರೆ. ಕೊರೊನಾ ವೈರಸ್ ಹಿನ್ನಲೆಯಲ್ಲಿ ಮಾಸ್ಕ್ ಕಡ್ಡಾಯವಾಗಿದೆ. ಆದ್ರೆ ಮುಖಕ್ಕೆ ಹಾಕುವ ಮಾಸ್ಕನ್ನು ಜನರು ಬೇರೆ ಬೇರೆ ಕೆಲಸಕ್ಕೆ ಬಳಸ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಫೋಟೋ ಒಂದು ವೈರಲ್ ಆಗಿದೆ.
ದಿನವಿಡಿ ಫೋನ್ ಬಳಸುವ ನಮಗೆ ಆಗಾಗ ಫೋನ್ ಚಾರ್ಜ್ ಹಾಕ್ತಿರಬೇಕು. ಕೆಲ ಸ್ಥಳಗಳಲ್ಲಿ ಫೋನ್ ಜಾರ್ಜ್ ಗೆ ಜಾಗವಿರುವುದಿಲ್ಲ. ಮತ್ತೆ ಕೆಲವು ಕಡೆ ಸ್ವಿಚ್ ಬೋರ್ಡ್ ಇರುತ್ತೆ. ಆದ್ರೆ ಮೊಬೈಲ್ ಇಡಲು ಸ್ಥಳವಿರುವುದಿಲ್ಲ. ಆಗ ಮೊಬೈಲ್ ಚಾರ್ಜ್ ಮಾಡೋದು ಹೇಗೆ ಎಂಬ ಸಮಸ್ಯೆ ಕಾಡುತ್ತದೆ. ಕೈನಲ್ಲಿ ಮಾಸ್ಕ್ ಇದ್ರೆ ಇನ್ಮುಂದೆ ಚಿಂತೆಪಡಬೇಕಾಗಿಲ್ಲವೆಂದು ವ್ಯಕ್ತಿಯೊಬ್ಬ ತೋರಿಸಿಕೊಟ್ಟಿದ್ದಾನೆ.
ಮಾಸ್ಕ್ ಸಹಾಯದಿಂದ ಮೊಬೈಲ್ ಇಡುವ ವ್ಯವಸ್ಥೆ ಮಾಡಿದ್ದಾನೆ. ಮಾಸ್ಕ್ ಸಹಾಯದಿಂದ ಮೊಬೈಲ್ ಸ್ಟ್ಯಾಂಡ್ ಮಾಡಿದ ವ್ಯಕ್ತಿ ಬುದ್ದಿವಂತಿಕೆಗೆ ಜನರು ಭೇಷ್ ಎಂದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್ ಆಗಿದೆ. ಆದ್ರೆ ಕೊರೊನಾ ಸಂದರ್ಭದಲ್ಲಿ ಮಾಸ್ಕ್, ಸ್ಟ್ಯಾಂಡ್ ಆಗುವುದು ಬೇಡವೆನ್ನುತ್ತಿದ್ದಾರೆ ಬುದ್ಧಿವಂತರು. ಮೊಬೈಲ್ ನಲ್ಲಿ ಸಾಕಷ್ಟು ಬ್ಯಾಕ್ಟೀರಿಯಾ ಇರಬಹುದು. ಅದು ಮಾಸ್ಕ್ ಗೆ ತಗುಲಿ ಅಪಾಯ ಆಹ್ವಾನಕ್ಕೆ ಕಾರಣವಾಗುತ್ತದೆ ಎಂಬುದು ಅವ್ರ ಅಭಿಪ್ರಾಯ.