ಕೊರೊನಾದಿಂದ ರಕ್ಷಿಸಿಕೊಳ್ಳಲು ಅಗತ್ಯವಾಗಿರುವ ಈ ಮುಖದ ಮಾಸ್ಕ್ ಗಳು ದಿನೇ ದಿನೇ ಫ್ಯಾಶನ್ ಸ್ಟೇಟ್‌ಮೆಂಟ್‌ಗಳಾಗಿ ಬದಲಾಗಿಬಿಟ್ಟಿವೆ. ಡಿಸೈನರ್, ಕಸ್ಟಮೈಸ್ಡ್ ಅಂತೆಲ್ಲಾ ಥರಾವರಿ ಟ್ರೆಂಡ್‌ಗಳು ಈ ಮಾಸ್ಕ್ ಗಳಲ್ಲೂ ಸಹ ಶುರುವಾಗಿಬಿಟ್ಟಿದೆ.
ತಮ್ಮ ಮುಖದ ಪ್ರಿಂಟ್ ಇದ್ದ ಮಾಸ್ಕ್ ಒಂದು, ಆರ್ಡರ್ ಕೊಟ್ಟಿದ್ದಕ್ಕಿಂತ 20% ದೊಡ್ಡದಿದ್ದು, ಅದನ್ನು ಧರಿಸಿಯೇ ಫೋಟೋ ತೆಗೆಸಿಕೊಂಡು ಟ್ವಿಟರ್‌ನಲ್ಲಿ ಪ್ರಕಟಿಸಿಕೊಂಡಿದ್ದಾರೆ @cameronmattis ಹೆಸರಿನ ಬಳಕೆದಾರ.
“ಒಳ್ಳೆಯ ಸುದ್ದಿ ಅಂದ್ರೆ, ನನ್ನ ಕಸ್ಟಮ್ ಫೇಸ್ ಮಾಸ್ಕ್ ಬಂದಿದೆ. ಕೆಟ್ಟ ಸುದ್ದಿ ಅಂದ್ರೆ, ಅದು 20%ನಷ್ಟು ತೀರಾ ದೊಡ್ಡದಿದೆ” ಎಂದು @cameronmattis ತಮ್ಮ ಪೋಸ್ಟ್‌ನಲ್ಲಿ ಹೇಳಿಕೊಂಡಿದ್ದಾರೆ.