ಬಿಹಾರದ ಗ್ರಾಮವೊಂದರಲ್ಲಿ ಮೃತನಾದ ರೈತನ ಅಂತ್ಯಸಂಸ್ಕಾರಕ್ಕೆ ಹಣ ಬೇಕೆಂಬ ಕಾರಣಕ್ಕೆ ನೆರೆ ಹೊರೆಯವರು ಬ್ಯಾಂಕ್ಗೆ ಆತನ ಶವವನ್ನ ಕೊಂಡೊಯ್ದಿದ್ದಾರೆ.
55 ವರ್ಷದ ಮಹೇಶ್ ಯಾದವ್ ದೀರ್ಘಕಾಲದ ಅನಾರೋಗ್ಯದ ಬಳಿಕ ಮಂಗಳವಾರ ಮುಂಜಾನೆ ನಿಧನರಾದರು. ಆದರೆ ಆತನಿಗೆ ಕುಟುಂಬಸ್ಥರು ಅಂತಾ ಯಾರೂ ಇರದ ಕಾರಣ ನೆರೆಹೊರೆಯವರೇ ಶವ ಸಂಸ್ಕಾರ ಮಾಡೋಕೆ ಮುಂದಾಗಿದ್ದಾರೆ.
ಮೃತ ರೈತನ ಶವಸಂಸ್ಕಾರಕ್ಕೆ ಹಣ ಪಾವತಿಸಲು ಆತನ ಮನೆಯಲ್ಲಿ ಯಾವುದಾದರೂ ಅಮೂಲ್ಯ ವಸ್ತು ಇದೇನಾ ಅಂತಾ ಸ್ಥಳೀಯರು ಹುಡುಕಾಡಿದ್ದಾರೆ. ಆದರೆ ಅಲ್ಲಿ ಏನೂ ಸಿಗಲಿಲ್ಲ. ಕೊನೆಗೆ ಮಹೇಶ್ ಯಾದವ್ ಬ್ಯಾಂಕ್ ಖಾತೆ ಪುಸ್ತಕ ತೆರೆದಾಗ ಅದರಲ್ಲಿ 1,17,298.28 ರೂಪಾಯಿ ಇರೋದನ್ನ ಸ್ಥಳೀಯರು ಗಮನಿಸಿದ್ದಾರೆ.
ಆದರೆ ಶಾಖಾ ವ್ಯವಸ್ಥಾಪಕರು ಹಣ ಬಿಡುಗಡೆ ಮಾಡಲು ಒಪ್ಪಿಗೆ ನೀಡದ ಕಾರಣ ಗ್ರಾಮಸ್ಥರು ಶವವನ್ನೇ ಬ್ಯಾಂಕ್ಗೇ ಹೊತ್ತೊಯ್ದಿದ್ದಾರೆ. ಬಳಿಕ ಪೊಲೀಸರ ಮಧ್ಯಸ್ಥಿಕೆಯಲ್ಲಿ ಶವ ಸಂಸ್ಕಾರಕ್ಕೆ ಹಣ ಬಿಡುಗಡೆ ಮಾಡಲಾಗಿದೆ.