ಪ್ರಾಂಕ್ ನೆಪದಲ್ಲಿ ಮಹಿಳೆಯರನ್ನು ಗುರಿಯಾಗಿಸಿ ನಡೆಸುವ ಕುಚೇಷ್ಟೆಗೆ ಕಡಿವಾಣ ಹಾಕಲು ರಾಷ್ಟ್ರೀಯ ಮಹಿಳಾ ಆಯೋಗ ಮುಂದಾಗಿದೆ.
ಯೂತ್ ಎಗೇನ್ಸ್ಟ್ ರೇಪ್ ಎಂಬ ಹೆಸರಿನ ಟ್ವಿಟ್ಟರ್ ಖಾತೆಯು ಅನೇಕ ವಿಡಿಯೊ ಪೋಸ್ಟ್ ಮಾಡಿದ್ದು, ಇವು ಸಾರ್ವಜನಿಕ ಸ್ಥಳಗಳಲ್ಲಿ ಪ್ರಾಂಕ್ ಹೆಸರಲ್ಲಿ ಮಹಿಳೆಯರಿಗೆ ಕಿರುಕುಳ ನೀಡುವ ಘಟನೆಗಳಾಗಿದ್ದವು.
ಪರೀಕ್ಷೆ ಮುಗಿದ 24 ಗಂಟೆಗಳಲ್ಲೇ ಫಲಿತಾಂಶ: RGUHS ನಿಂದ ವಿಶಿಷ್ಟ ದಾಖಲೆ
ಈ ದೂರನ್ನು ಪರಿಗಣಿಸಿ, ಯೂಟ್ಯೂಬ್ನಲ್ಲಿ ಲಭ್ಯವಾಗುವ ಪ್ರಾಂಕ್ ವಿಡಿಯೋ ಪರಿಶೀಲಿಸಿ ಕುಚೇಷ್ಟೆ ಮಾಡುವವರನ್ನು ಶಿಕ್ಷಿಸಲು ನಿರ್ಧರಿಸಲಾಗಿದೆ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಹೇಳಿದ್ದಾರೆ.
ತಮಾಷೆಯ ಯೂಟ್ಯೂಬ್ ಚಾನಲ್ ನೆಪದಲ್ಲಿ ಕಿರುಕುಳ ನೀಡುವುದು, ಅದನ್ನು ಹಣ ಸಂಪಾದಿಸುವ ಮಾರ್ಗವಾಗಿಯೂ ಬಳಸಲಾಗುತ್ತಿದೆ.