ಅಕ್ರಮವಾಗಿ ಲಿಕ್ಕರ್ಗಳನ್ನ ಸಾಗಿಸೋಕೆ ದುಷ್ಕರ್ಮಿಗಳು ಹೇಗೆ ಪ್ಲಾನ್ ಮಾಡ್ತಾರೆ ಅಂತಾ ಊಹಿಸೋದು ಕಷ್ಟವಾಗುತ್ತೆ. ಇಂತಹದ್ದೇ ಒಂದು ದೃಶ್ಯವನ್ನ ಮಹೀಂದ್ರಾ & ಮಹೀಂದ್ರಾ ಕಂಪನಿ ಮಾಲೀಕ ಆನಂದ್ ಮಹೀಂದ್ರಾ ಟ್ವಿಟರ್ನಲ್ಲಿ ಶೇರ್ ಮಾಡಿದ್ದಾರೆ.
ಟ್ವಿಟರ್ನಲ್ಲಿ ಆನಂದ್ ಮಹೀಂದ್ರಾ ಗುಜರಾತ್ನಲ್ಲಿ ಅಕ್ರಮ ಮದ್ಯವನ್ನ ವಶಪಡಿಸಿಕೊಂಡ ದೃಶ್ಯವನ್ನ ಶೇರ್ ಮಾಡಿದ್ದಾರೆ. 1 ನಿಮಿಷ 30 ಸೆಕೆಂಡ್ನ ವಿಡಿಯೋದಲ್ಲಿ ಪಿಕಪ್ ಟ್ರಕ್ನ ಕನ್ಸೀಲ್ಡ್ ಕ್ಯಾಬಿನೇಟ್ ಭಾಗದಲ್ಲಿ ಲಿಕ್ಕರ್ಗಳನ್ನ ಸಂಗ್ರಹಿಸಿ ಇಟ್ಟಿರೋದನ್ನ ನೀವು ಕಾಣಬಹುದಾಗಿದೆ. ಆದರೆ ಪೊಲೀಸರು ದುಷ್ಕರ್ಮಿಗಳ ಈ ಕಳ್ಳಾಟವನ್ನ ಕಂಡು ಹಿಡಿದಿದ್ದಾರೆ.
ಈ ಕಾರಣಕ್ಕೆ ಬಳಕೆದಾರರ ಕ್ಷಮೆ ಯಾಚಿಸಿದ ‘ಫೇಸ್ಬುಕ್’
ಈ ವಿಡಿಯೋವನ್ನ ಶೇರ್ ಮಾಡಿರುವ ಆನಂದ್ ಮಹೀಂದ್ರಾ ಈ ವಿನ್ಯಾಸವನ್ನ ಶ್ಲಾಘಿಸಿದ್ದಾರೆ. ಮಹೀಂದ್ರಾ ವಾಹನಗಳು ಈ ರೀತಿಯ ರಹಸ್ಯ ವಿನ್ಯಾಸವನ್ನ ಹೊಂದಿರೋದಿಲ್ಲ. ಇದು ಕಳ್ಳರ ಚಾಣಾಕ್ಷತೆ ಎಂದು ಶೀರ್ಷಿಕೆ ನೀಡಿದ್ದಾರೆ. ಈ ವಿಡಿಯೋ ಲಕ್ಷಗಟ್ಟಲೇ ವೀವ್ಸ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.
https://twitter.com/i/status/1372801084612169731