ಮುಂಬೈ: ಪುಣೆ-ಮುಂಬೈ ಎಕ್ಸ್ ಪ್ರೆಸ್ ಹೈವೆಯಲ್ಲಿ ಶಿವಸೇನೆ ಲೋಗೊದ ಸ್ಟಿಕ್ಕರ್ ಹಚ್ಚಿಕೊಂಡ ಕಾರಿನಲ್ಲಿ ಇಬ್ಬರು ಗನ್ ಹಿಡಿದು ಲಾರಿ ಚಾಲಕರನ್ನು ಬೆದರಿಸುತ್ತಿರುವ ವಿಡಿಯೋ ವೈರಲ್ ಆಗಿದೆ.
ಔರಂಗಾಬಾದ್ ಎಂಪಿ ಇಮ್ತಿಯಾಜ್ ಜಲೀಲ್ ಈ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ. ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಕಚೇರಿ, ಗೃಹ ಸಚಿವ ಅನಿಲ್ ದೇಶಮುಖ್, ಹಾಗೂ ಅಲ್ಲಿನ ಡಿಜಿಪಿ ಅವರಿಗೆ ಟ್ಯಾಗ್ ಮಾಡಿದ್ದಾರೆ. ಪ್ರಕರಣ ದಾಖಲಿಸುವಂತೆ ಆಗ್ರಹಿಸಿದ್ದಾರೆ.
ಅಬ್ದುಲ್ ಕಲಾಂ ಬಗ್ಗೆ ಜೋಕ್ ಮಾಡಿ ಪೊಲೀಸರಿಂದ ವಾರ್ನಿಂಗ್ ಪಡೆದಿದ್ದ ಸ್ಟಾಂಡ್ ಅಪ್ ಕಮೆಡಿಯನ್
ರಾಯಘಡ ಜಿಲ್ಲೆಯ ಕೋಪೋಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಬ್ಬರು ಆರೋಪಿಗಳನ್ನು ಹುಡುಕಲು ಬಲೆ ಬೀಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.