ಸಾಮಾಜಿಕ ಜಾಲತಾಣದಲ್ಲಿ ನಿಮ್ಮ ಮನಸ್ಸಿಗೆ ಮುದ ನೀಡುವಂತ ಸಾಕಷ್ಟು ವಿಡಿಯೋಗಳು ಕಾಣ ಸಿಗುತ್ವೆ. ಆದರೆ ಫುಟ್ಪಾತ್ಗಳಲ್ಲಿ ಇಲ್ಲವೇ ಅಂಗಳದಲ್ಲಿ ಅಳವಡಿಸಲಾಗುವ ಇಂಟರ್ಲಾಕ್ಗಳಿಂದಲೂ ಮನರಂಜನೆ ಸಿಗಬಹುದು ಅಂತಾ ಎಂದಾದರೂ ಊಹಿಸಿದ್ದೀರಾ..?
ಫೇಸ್ಬುಕ್ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿರುವ ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಇಂಟರ್ಲಾಕ್ಗಳನ್ನ ಸರಿಯಾದ ಕ್ರಮದಲ್ಲಿ ಜೋಡಿಸುವ ರೀತಿ ಒಂದು ರೀತಿ ಮಜಾ ಕೊಡುವಂತಿದೆ.
ರಸ್ತೆಯಲ್ಲಿ ಹೆಂಗೆಂಗೋ ಜೋಡಿಸಿಟ್ಟ ಇಂಟರ್ಲಾಕ್ಗಳನ್ನ ಕಿತ್ತು ಈತ ಬೂದು ಹಾಗೂ ಕೆಂಪು ಬಣ್ಣದ ಕಲ್ಲುಗಳನ್ನ ಸಾಲಾಗಿ ತಾಳ್ಮೆಯಿಂದ ಜೋಡಿಸಿದ್ದಾನೆ.