alex Certify ತನ್ನ ಮದುವೆಯಲ್ಲಿ ಸ್ವತಃ ವಾದ್ಯ ನುಡಿಸಿದ ವರ..! ವೈರಲ್​ ಆಯ್ತು ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತನ್ನ ಮದುವೆಯಲ್ಲಿ ಸ್ವತಃ ವಾದ್ಯ ನುಡಿಸಿದ ವರ..! ವೈರಲ್​ ಆಯ್ತು ವಿಡಿಯೋ

ಮದುವೆ ಮನೆಯಲ್ಲಿ ವಾದ್ಯದ ಸಪ್ಪಳ ಕೇಳಿಲ್ಲ ಅಂದರೆ ವಿವಾಹ ಕಾರ್ಯಕ್ರಮಕ್ಕೊಂದು ಶೋಭೆ ಇರೋದಿಲ್ಲ. ಆದರೆ ದೇಶದಲ್ಲಿ ಕೊರೊನಾ ಕೇಸ್​ ದಿನದಿಂದ ದಿನಕ್ಕೆ ಏರಿಕೆ ಕಾಣ್ತಿರೋದ್ರಿಂದ ಎಲ್ಲರಿಗೂ ಮೊದಲಿನ ಹಾಗೆ ಇಷ್ಟ ಬಂದಂತೆಲ್ಲ ಮದುವೆ ಆಗಲು ಸಾಧ್ಯವಾಗ್ತಿಲ್ಲ.

ಕೆಲವರು ತಮ್ಮ ಮದುವೆ ದಿನಾಂಕವನ್ನ ಮುಂದೂಡ್ತಾ ಇದ್ದರೆ ಇನ್ನೂ ಹಲವರು ಮನೆಯಲ್ಲಿಯೇ ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಡ್ತಾ ಇದ್ದಾರೆ. ಇದೇ ರೀತಿ ಕೊರೊನಾ 2ನೇ ಅಲೆಯ ನಡುವೆಯೇ ಜೋಡಿಯೊಂದು ಮದುವೆಯಾಗಿದ್ದು ಇದರಲ್ಲಿ ವರ ಸ್ವತಃ ತಾನೇ ಮದುವೆ ವಾದ್ಯವನ್ನ ನುಡಿಸುತ್ತಿದ್ದಾನೆ. ಈ ವಿಡಿಯೋವನ್ನ ಐಪಿಎಸ್​ ಅಧಿಕಾರಿ ರೂಪಿನ್​ ಶರ್ಮಾ ಟ್ವಿಟರ್​ನಲ್ಲಿ ಶೇರ್​ ಮಾಡಿದ್ದಾರೆ.

ಕೋವಿಶೀಲ್ಡ್ – ಕೋವ್ಯಾಕ್ಸಿನ್ – ಸ್ಪುಟ್ನಿಕ್ ವಿ ಲಸಿಕೆಗಳ ಕುರಿತು ನಿಮಗೆ ತಿಳಿದಿರಲಿ ಈ ಮಾಹಿತಿ

30 ಸೆಕೆಂಡ್​ಗಳ ವಿಡಿಯೋದಲ್ಲಿ, ವರ ಸಾಂಪ್ರದಾಯಿಕ ಉಡುಗೆಯನ್ನ ಧರಿಸಿದ್ದು ಈ ವಿಶೇಷ ದಿನಕ್ಕೆ ಸ್ವತಃ ತಾನೇ ವಾದ್ಯ ಬಾರಿಸಿದ್ದಾನೆ. ವಧು, ವರನ ಪಕ್ಕದಲ್ಲಿ ನಿಂತಿರೋದನ್ನ ನೀವು ಕಾಣಬಹುದಾಗಿದೆ.

ಈ ವಿಡಿಯೋ ನೋಡಿದ ನೆಟ್ಟಿಗರು ತರಹೇವಾರಿ ಕಮೆಂಟ್​​ಗಳನ್ನ ಹಾಕಿದ್ದಾರೆ. ಒಬ್ಬರು ಆತ್ಮನಿರ್ಭರ್​ ವರ ಎಂದು ಹೇಳಿದ್ರು ಇನ್ನು ಹಲವರು ಕೊರೊನಾ ನಿಯಮಗಳನ್ನ ಪಾಲಿಸಿದ ವರ ಎಂದು ಬರೆದಿದ್ದಾರೆ.

https://twitter.com/i/status/1392295464293203969

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...