ಬಂಡಿಗೆ ಎತ್ತನ್ನು ಹೂಡುವುದು ಸುಲಭದ ಕೆಲಸವಲ್ಲ. ನೊಗ ಹೊರಲು ಹಿಂದೇಟು ಹಾಕುವ ಎತ್ತುಗಳೇ ಹೆಚ್ಚು. ಅವುಗಳನ್ನು ಬಲವಂತದಿಂದ ಅಥವಾ ಮನವೊಲಿಸಿ ಕರೆತಂದು ನೊಗ ಹೊರಿಸಬೇಕು.
ಅಂಥದರಲ್ಲಿ ಇಲ್ಲೊಂದು ಎತ್ತು, ಹುಲ್ಲು ಹೇರಿದ್ದ ಬಂಡಿಯ ಬಳಿ ತಾನೇ ಬರುತ್ತದೆ, ತನ್ನ ಕೊಂಬು (ಕೋಡು) ಬಳಸಿ ನೊಗವೆತ್ತಿ ಭುಜದ ಮೇಲೆ ಕೂರಿಸಿಕೊಳ್ಳುತ್ತದೆ. ಗಾಡಿಯನ್ನು ತಾನೇ ಎಳೆದೊಯ್ಯುತ್ತದೆ.
ಇಂತಹ 12 ಸೆಕೆಂಡಿನ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, 1.5 ಲಕ್ಷ ಜನ ವೀಕ್ಷಿಸಿದ್ದಾರಲ್ಲದೆ, 23 ಸಾವಿರ ಮಂದಿ ಮೆಚ್ಚಿಕೊಂಡಿದ್ದಾರೆ.
ದನದ ಕಾಯಕನಿಷ್ಠೆಯನ್ನು ನೆಟ್ಟಿಗರು ಒಂದೊಂದು ರೀತಿಯಲ್ಲಿ ವರ್ಣಿಸಿದ್ದು, ಕಾಯಕವೇ ಕೈಲಾಸ, ಆತ್ಮನಿರ್ಭರತೆಯನ್ನು ಈ ಬಸವನಿಂದ ಕಲಿಯಬೇಕು ಎಂಬಿತ್ಯಾದಿ ಕಮೆಂಟ್ ಗಳನ್ನು ಹಾಕಿದ್ದಾರೆ.