ಹುಲಿಗಳು ಒಳ್ಳೆಯ ಈಜುಪಟುಗಳು. ಸಿಂಹಗಳು ಈಜುವುದು ಕಡಿಮೆ. ಆದರೆ, ಮೂರು ಸಿಂಹಗಳು ಗುಜರಾತ್ ನ ಗಿರ್ ಅರಣ್ಯದ ಶೆತುರಂಜಿ ನದಿಯ ಸುಮಾರು 200 ಮೀಟರ್ ವ್ಯಾಪ್ತಿಯಲ್ಲಿ ಈಜುತ್ತಿರುವ ವಿಡಿಯೋ ವೈರಲ್ ಆಗಿದೆ.
ಐಎಫ್ಎಸ್ ಅಧಿಕಾರಿ ಡಾ.ಅಂಶುಮಾ ಟ್ವೀಟ್ ಮಾಡಿದ್ದು, “ಸಿಂಹಗಳು ಒಳ್ಳೆಯ ಈಜುಪಟುಗಳಲ್ಲ. ಆದರೆ, ಇಲ್ಲಿ ಮೂರು ಸಿಂಹಗಳು ಈಜಿ ಶೇತುರಂಗಿ ನದಿಯ ದ್ವೀಪದತ್ತ ಸಾಗುತ್ತಿರುವುದನ್ನು ಗಿರ್ ಅಭಯಾರಣ್ಯ ಸಿಬ್ಬಂದಿ ಗಮನಿಸಿದ್ದಾರೆ” ಎಂದು ಬರೆದುಕೊಂಡಿದ್ದಾರೆ.
ಬೀಟ್ ಗಾರ್ಡ್ ಸರಳ್ ಎಂಬುವವರು ಇದನ್ನು ವಿಡಿಯೋ ಮಾಡಿದ್ದು, ಅವು ನೀರಿಗೆ ಹೋಗುವುದು ಅಪರೂಪ ಎಂದಿದ್ದಾರೆ. ವಿಡಿಯೋವನ್ನು 28 ಸಾವಿರ ಜನ ವೀಕ್ಷಿಸಿದ್ದು, ಸಾವಿರಾರು ಜನ ಲೈಕ್ ಮಾಡಿದ್ದಾರೆ.