
ಮಹಾರಾಷ್ಟ್ರದ ಡಿಸಿಎಫ್ ವೆಸ್ಟ್ ನಾಸಿಕ್ ಎಂಬ ಟ್ವಿಟ್ಟರ್ ಖಾತೆಯಲ್ಲಿ 45 ಸೆಕೆಂಡ್ ನ ವಿಡಿಯೋವನ್ನು ಅಪ್ಲೋಡ್ ಮಾಡಲಾಗಿದೆ. “ಗಾತ್ರದಲ್ಲಿ ಚಿಕ್ಕದಿರಬಹುದು ಸ್ಪೂರ್ತಿಯಲ್ಲಿ ದೊಡ್ಡದು. ಇಲ್ಲಿ ಶಕ್ತಿವಂತರ ಉಳಿಕೆ” ಎಂದು ಕ್ಯಾಪ್ಶನ್ ನೀಡಲಾಗಿದೆ. ಈ ವಿಡಿಯೋವನ್ನು ನವೀನ್ ಅಂಗುಸ್ವಾಮಿ ಎಂಬ ಐಎಫ್ಎಸ್ ಅಧಿಕಾರಿ ರಿಟ್ವೀಟ್ ಮಾಡಿದ್ದಾರೆ.
ಚಿಕ್ಕ ಮರವೊಂದರ ತುದಿಗೆ ಕಾಳಿಂಗ ವಿಹರಿಸುತ್ತಿರುತ್ತದೆ. ಅತ್ಯಂತ ಸ್ತಬ್ಧ ವಾತಾವರಣದಲ್ಲಿ ಬಂದ ಮುಂಗುಸಿ ಸುಮಾರು ಮೂರೂವರೆ ಅಡಿ ಎತ್ತರದಲ್ಲಿರುವ ತನ್ನ ಬೇಟೆಯನ್ನು ಜಿಗಿದು ಹಿಡಿಯುತ್ತದೆ. ನೇರವಾಗಿ ಹಾವಿನ ಕುತ್ತಿಗೆಗೇ ಬಾಯಿ ಹಾಕಿದ ಮುಂಗುಸಿ ಅದಕ್ಕೆ ಉಸಿರಾಡಲೂ ಅವಕಾಶ ನೀಡುವುದಿಲ್ಲ. ಹಾವು ಮುಂಗುಸಿಯನ್ನು ಸುತ್ತಿ ತಪ್ಪಿಸಿಕೊಳ್ಳಲು ನೋಡುತ್ತದೆ. ಆದರೆ, ಅದಕ್ಕೆ ಅವಕಾಶ ನೀಡದ ಮುಂಗುಸಿ ತನ್ನ ಬೇಟೆಯನ್ನು ಮರೆಗೆ ಕೊಂಡೊಯ್ಯುತ್ತದೆ. ಇಷ್ಟು ಮಾತ್ರ ವಿಡಿಯೋದಲ್ಲಿ ಸೆರೆಯಾಗಿದೆ.