
ಈ ವಾಹನವನ್ನ ನಿರ್ಮಾಣ ಮಾಡೋಕೆ ಮೂರು ಲಕ್ಷ ರೂಪಾಯಿ ಖರ್ಚಾಗಿದೆ. ತಿಳಿ ನೀಲಿ ಬಣ್ಣದಲ್ಲಿ ಈ ವಾಹನಕ್ಕೆ ಬಣ್ಣ ಬಳಿಯಲಾಗಿದೆ. ಬಾನೆಟ್ನಲ್ಲಿ ರಾಮ್ಪಾಲ್ ಏರ್ ಲೈನ್ ಎಂದು ಬರೆಯಲಾಗಿದೆ. ಅಲ್ಲದೇ ಕೆಲ ಫೋನ್ ನಂಬರ್ನ್ನು ಬರೆಯಲಾಗಿದೆ. ಬಹುಶಃ ಇದು ರಾಮ್ ಅವರ ಮೊಬೈಲ್ ಸಂಖ್ಯೆ ಇದ್ದಿರಬಹುದು.
ಈ ವಾಹನಕ್ಕೆ ಛಾವಣಿ ಇಲ್ಲ. ಆದರೆ ಕನ್ನಡಿ, ವಿಂಡ್ಶೀಲ್ಡ್ಗಳನ್ನ ಅಳವಡಿಸಲಾಗಿದೆ. ವಾಹನದ ಹಿಂಬದಿಗೆ ನಕ್ಷತ್ರಗಳನ್ನ ಪೇಂಟ್ ಮಾಡಲಾಗಿದೆ. ಈ ವಾಹನವು 9 ಅಡಿ ಅಗಲ ಹಾಗೂ 18 ಅಗಲಿ ಉದ್ದವಾಗಿದೆ. ಮಾರುತಿ ಕಾರಿನ ಇಂಜಿನ್ ಹಾಗೂ ಗಿಯರ್ಗಳನ್ನ ಬಳಸಿ ಈ ವಾಹನವನ್ನ ಸಿದ್ಧಪಡಿಸಲಾಗಿದೆ. ಮುಂಭಾಗದ ಎರಡು ಚಕ್ರ ಚಿಕ್ಕದಾಗಿದ್ದರೆ ಹಿಂಬದಿ ಚಕ್ರ ದೊಡ್ಡದಾಗಿದೆ.