alex Certify ಜಾಲತಾಣದಲ್ಲಿ ಅಪರೂಪದ ಹಾವಿನ ಫೋಟೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಾಲತಾಣದಲ್ಲಿ ಅಪರೂಪದ ಹಾವಿನ ಫೋಟೋ ವೈರಲ್

ಉತ್ತರ ಪ್ರದೇಶದ ದುಧುವಾ ರಾಷ್ಟ್ರೀಯ ಉದ್ಯಾನದಲ್ಲಿ 80 ವರ್ಷಗಳ ನಂತರ ಪತ್ತೆಯಾಗಿರುವ ಅತ್ಯಪರೂಪದ ಕೆಂಪು ಹವಳದ ಕುಕ್ರಿ ಹಾವು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಭಾರತ – ನೇಪಾಳ ಗಡಿ ಭಾಗದಲ್ಲಿ ಇರುವ ಅರಣ್ಯ ಪ್ರದೇಶ ಹಲವು ವೈಶಿಷ್ಟ್ಯದಿಂದ ಕೂಡಿದ್ದು, ಸರೀಸೃಪಗಳ ಸಂಖ್ಯೆ ಕಡಿಮೆಯೇ ಎನ್ನಬಹುದು.

ಅದರಲ್ಲೂ ಈಗ ಪತ್ತೆಯಾಗಿರುವ ಕೆಂಪು ಹವಳದ ಕುಕ್ರಿ ಹಾವು ಅಪರೂಪದಲ್ಲಿ ಅಪರೂಪದ್ದು. 1936 ರಲ್ಲಿ ಕಾಣಿಸಿಕೊಂಡಿದ್ದು ಬಿಟ್ಟರೆ, 82 ವರ್ಷಗಳಿಂದೀಚೆಗೆ ಯಾರೂ ನೋಡಿಲ್ಲ.

ಹಿರಿಯ ಐಎಫ್ಎಸ್ ಅಧಿಕಾರಿ‌ ರಮೇಶ್ ಪಾಂಡೆ ಪ್ರಕಾರ, ಇತ್ತೀಚಿನ ವರ್ಷಗಳಲ್ಲಿ ನೋಡಿಯೇ ಇರಲಿಲ್ಲ. ಸಂಜೆ ಮಳೆಯ ನಂತರ ಸಿಬ್ಬಂದಿ ಕಾಟೇಜ್ ಬಳಿ ಕಾಣಿಸಿಕೊಂಡಿದೆ. ಸಿಬ್ಬಂದಿಯೇ ಅದರ ಫೋಟೋ ತೆಗೆದು ವನ್ಯಜೀವಿ ಸಂರಕ್ಷಣೆ ಮತ್ತು ವೈಲ್ಡ್ ಲೆನ್ಸ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ಹವಳದಂತೆ ಹೊಳೆಯುವ ಕಿತ್ತಳೆ ಹಾಗೂ ಕೆಂಪು ಮಿಶ್ರಿತ ಬಣ್ಣ ಅತ್ಯಾಕರ್ಷಕವಾಗಿದೆ. ಮೊಟ್ಟೆ ಮತ್ತಿತರ ಆಹಾರ ತಿನ್ನಲು ಅನುಕೂಲ ಆಗುವಂತೆ ನೇಪಾಳದ ಕುಕ್ರಿ ಕತ್ತಿಯಂತೆ ಹಲ್ಲುಗಳಿರುವುದರಿಂದ ಇದಕ್ಕೆ ಕೆಂಪು ಹವಳದ ಕುಕ್ರಿ ಹಾವು ಎಂದು ಕರೆಯಲಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...