ಕೊರೊನಾ ತಡೆಗಟ್ಟಲು ಸರ್ಕಾರ ಹೊಸ ಸಲಹೆಯನ್ನು ನೀಡಿದೆ. ಕೊರೊನಾ ರೋಗಿ ಕೆಮ್ಮಿದಾಗ ಹಾಗೂ ಸೀನಿದಾಗ ಹೊರ ಬರುವ ವೈರಸ್ ಗಾಳಿಯಲ್ಲಿ 10 ಮೀಟರ್ ವರೆಗೆ ಕ್ರಮಿಸಬಲ್ಲದು. ಇಂತಹ ಪರಿಸ್ಥಿತಿಯಲ್ಲಿ ಗಾಳಿ ಸರಿಯಾಗಿರುವ ಸ್ಥಳಕ್ಕೆ ಆದ್ಯತೆ ನೀಡಿ. ಕೋಣೆ ಬದಲು ತೆರೆದ ಮತ್ತು ಗಾಳಿಯಾಡುವ ಸ್ಥಳದಲ್ಲಿ ಹೆಚ್ಚು ಸಮಯ ಕಳೆಯಿರಿ ಎಂದು ಸರ್ಕಾರ ಹೇಳಿದೆ. ಕೆಲವು ಸುಲಭ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಸೋಂಕಿನ ಅಪಾಯವನ್ನು ಕಡಿಮೆ ಮಾಡಬಹುದು ಎಂದು ಸರ್ಕಾರ ತಿಳಿಸಿದೆ.
ತೆರೆದ ಪ್ರದೇಶದಲ್ಲಿ ಸೋಂಕಿನ ಅಪಾಯ ಕಡಿಮೆ. ಕಚೇರಿ, ಸಾರ್ವಜನಿಕ ಪ್ರದೇಶಗಳಲ್ಲಿ ಇದ್ರ ಬಗ್ಗೆ ಗಮನವಿರಬೇಕು. ಮನೆ, ಕಚೇರಿಗಳಲ್ಲಿ ಸದಾ ಕಿಟಕಿಗಳು ತೆರೆದಿರಲಿ. ಬಾಗಿಲು ತೆರೆದಿಟ್ಟು ಹೊಸ ಗಾಳಿ ಮನೆ ಪ್ರವೇಶ ಮಾಡುವಂತೆ ನೋಡಿಕೊಳ್ಳಿ. ಕಿಟಕಿ, ಬಾಗಿಲು ತೆರೆದು ಫ್ಯಾನ್ ಬಳಸಬಹುದು. ಇದ್ರಿಂದ ಉತ್ತಮ ಗಾಳಿ ಕೋಣೆಯನ್ನು ಆವರಿಸುತ್ತದೆ.
ಕಿಟಕಿಗಳು ಮತ್ತು ಬಾಗಿಲುಗಳನ್ನು ಮುಚ್ಚಿದ ಎಸಿ ಕೋಣೆಯಲ್ಲಿ ಸೋಂಕಿನ ಅಪಾಯ ಹೆಚ್ಚು ಎಂದು ಸರ್ಕಾರ ಸಲಹೆ ನೀಡಿದೆ. ಮನೆ, ಕಚೇರಿ ಸೇರಿದಂತೆ ಕಾರುಗಳಲ್ಲಿ ಕೂಡ ಎಸಿ ಬಳಸಬೇಡಿ. ಮುಚ್ಚಿದ ಕೋಣೆಯಲ್ಲಿ ವೈರಸ್ ಹೊರಗೆ ಹೋಗಲು ಅವಕಾಶವಿರುವುದಿಲ್ಲ. ಅಲ್ಲಿಯೇ ವೈರಸ್ ಓಡಾಡುತ್ತಿರುವ ಕಾರಣ ಬೇರೆಯವರಿಗೆ ಬೇಗ ಹರಡುತ್ತದೆ.