ಅಶೋಕ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಹಾಗೂ ಮ್ಯಾನೇಜ್ಮೆಂಟ್ನ ಮೂವರು ವಿದ್ಯಾರ್ಥಿಗಳು ಪ್ರವಾಹದ ಮುನ್ನೆಚ್ಚರಿಕೆಯನ್ನ ನೀಡಬಲ್ಲ ಅಲಾರಂ ಒಂದನ್ನ ಕಂಡು ಹಿಡಿದಿದ್ದಾರೆ. ಈ ಅಲಾರಂನ ಸಹಾಯದಿಂದ ಜನತೆ ನೈಸರ್ಗಿಕ ವಿಪತ್ತಿನಿಂದ ಪಾರಾಗಬಹುದಾಗಿದೆ.
ಇನ್ನು ಈ ವಿಚಾರವಾಗಿ ಮಾತನಾಡಿದ ವಿದ್ಯಾರ್ಥಿನಿ ಅನು ಸಿಂಗ್, ಉತ್ತರಾಖಂಡ್ ದುರಂತದಲ್ಲಿ ಸಾಕಷ್ಟು ಅಮಾಯಕರು ಜೀವ ಕಳೆದುಕೊಂಡಿದ್ದಾರೆ. ಹೀಗಾಗಿ ನಾವು ಈ ಅಲಾರಂ ಸೆನ್ಸರ್ನ್ನು ಕಂಡುಹಿಡಿದಿದ್ದು, ಇದರ ಸಹಾಯದಿಂದಾಗಿ ಜನತೆಗೆ ಬೇಗನೇ ಅಲರ್ಟ್ ಆಗಬಹುದಾಗಿದೆ.
ಈ ಅಲಾರಂಗಳನ್ನ ಡ್ಯಾಂ ಇಲ್ಲವೇ ದುರಂತ ನಡೆಯುವ ಸಾಧ್ಯತೆ ಇರುವ ಸ್ಥಳಗಳ ಬಳಿ ಫಿಕ್ಸ್ ಮಾಡಬೇಕು. ಈ ಅಲಾರಂ 500 ಮೀಟರ್ ದೂರದಲ್ಲಿ ಪ್ರವಾಹದ ಪರಿಸ್ಥಿತಿ ಉಂಟಾಗುವ ಮುನ್ಸೂಚನೆಯನ್ನು ನೀಡಲಿದೆ. ಈ ಸೆನ್ಸಾರ್ನ ಕಾರ್ಯಕ್ಷಮತೆಯನ್ನ ಇನ್ನಷ್ಟು ಹೆಚ್ಚಿಸಲು ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಇದೊಂದು ಚಾರ್ಜ್ ಮಾಡಬಲ್ಲ ಸೆನ್ಸಾರ್ ಆಗಿದ್ದು ಒಮ್ಮೆ ಚಾರ್ಜ್ ಮಾಡಿದ್ರೆ 6 ತಿಂಗಳುಗಳ ಕಾಲ ಕಾರ್ಯನಿರ್ವಹಿಸಲಿದೆ. ಒಂದು ಸೆನ್ಸಾರ್ ನಿರ್ಮಾಣ ಮಾಡಲು 7000 – 8000 ರೂಪಾಯಿ ವೆಚ್ಚ ತಗಲುತ್ತದೆ ಎಂದೂ ಹೇಳಿದ್ರು.