ದೇಶದಲ್ಲಿ ಕೊರೊನಾ ವೈರಸ್ ಕೇಸ್ ದಿನದಿಂದ ದಿನಕ್ಕೆ ಗಣನೀಯ ಏರಿಕೆ ಕಾಣ್ತಿರೋದ್ರ ಬೆನ್ನಲ್ಲೇ ವೈದ್ಯಕೀಯ ಸೌಲಭ್ಯಗಳ ಕೊರತೆಯನ್ನ ಎದುರಿಸುವಂತಾಗಿದೆ. ಈ ವಿಚಾರವನ್ನ ಗಮನದಲ್ಲಿಟ್ಟುಕೊಂಡ ಗುಜರಾತ್ನ ವಡೋದರಾದಲ್ಲಿರುವ ಮಸೀದಿಯೊಂದು 50 ರೋಗಿಗಳಿಗೆ ವಾಸ್ತವ್ಯ ಸೌಕರ್ಯ ಕಲ್ಪಿಸಿದೆ.
ಜಹಂಗಿಪುರದಲ್ಲಿರುವ ಮಸೀದಿಯನ್ನ 50 ಬೆಡ್ಗಳ ಆಸ್ಪತ್ರೆಯನ್ನಾಗಿ ಮಾರ್ಪಾಡು ಮಾಡಲಾಗಿದೆ. ಕೊರೊನಾ ರೋಗಿಗಳು ಆಸ್ಪತ್ರೆಯ ಅಭಾವವನ್ನ ಎದುರಿಸುತ್ತಿರೋದ್ರ ಹಿನ್ನೆಲೆಯಲ್ಲಿ ಮಸೀದಿಯಲ್ಲಿ ಈ ವ್ಯವಸ್ಥೆಯನ್ನ ಕಲ್ಪಿಸಲಾಗಿದೆ.
ಇನ್ನು ಈ ವಿಚಾರವಾಗಿ ಮಾತನಾಡಿದ ಮಸೀದಿಯ ಟ್ರಸ್ಟಿ ಇರ್ಫಾನ್ ಶೇಖ್, ಕೊರೊನಾ ವೈರಸ್ ಕೇಸ್ ಕಳೆದ ಕೆಲದಿನಗಳಿಂದ ಗಣನೀಯ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ. ಇದರಿಂದಾಗಿ ಆಕ್ಸಿಜನ್ ಕೊರತೆ ಹಾಗೂ ಆಸ್ಪತ್ರೆಗಳಲ್ಲಿ ಬೆಡ್ಗಳ ಕೊರತೆ ಉಂಟಾಗುತ್ತಿದೆ.
ಈ ಎಲ್ಲಾ ಅಂಶಗಳನ್ನ ಗಮನದಲ್ಲಿಟ್ಟುಕೊಂಡುನಾವು ಮಸೀದಿಯಲ್ಲಿ ಕೋವಿಡ್ ಚಿಕಿತ್ಸಾ ಕೇಂದ್ರವಾಗಿ ಬದಲಾಯಿಸಲು ನಿರ್ಧರಿಸಿದ್ವಿ. ಇದಕ್ಕಾಗಿ ರಂಜಾನ್ ತಿಂಗಳನ್ನ ಆಯ್ಕೆ ಮಾಡಿಕೊಂಡೆವು ಎಂದು ಹೇಳಿದ್ರು.