alex Certify ಕೊರೊನಾ ಲಸಿಕೆಯ ಎರಡು ಡೋಸ್​ ನಡುವಿನ ಅಂತರದ ಬಗ್ಗೆ ಇಲ್ಲಿದೆ ಮಹತ್ವದ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಲಸಿಕೆಯ ಎರಡು ಡೋಸ್​ ನಡುವಿನ ಅಂತರದ ಬಗ್ಗೆ ಇಲ್ಲಿದೆ ಮಹತ್ವದ ಮಾಹಿತಿ

ಕೊರೊನಾ ವೈರಸ್​ ವಿರುದ್ಧ ಲಸಿಕೆಯ ಪರ್ವ ದೇಶದಲ್ಲಿ ಆರಂಭವಾಗಿದೆ. ಕೇಂದ್ರ ಸರ್ಕಾರ ಅನುಮೋದನೆ ನೀಡಿರುವ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್​ ಲಸಿಕೆಗಳನ್ನ ದೇಶದ ಆರೋಗ್ಯ ಸಿಬ್ಬಂದಿ ಸ್ವೀಕರಿಸುತ್ತಿದ್ದಾರೆ. ಈ ನಡುವೆ ಪೂನಾವಾಲಾ ಸೀರಮ್​ ಇನ್​ಸ್ಟಿಟ್ಯೂಟ್​​​ ಆಫ್​ ಇಂಡಿಯಾದ ಉನ್ನತ ವಿಜ್ಞಾನಿ ಕೋವಿಶೀಲ್ಡ್ ಲಸಿಕೆ ಸ್ವೀಕಾರದ ಬಗ್ಗೆ ಮಹತ್ವದ ಮಾಹಿತಿಯೊಂದನ್ನ ನೀಡಿದ್ದಾರೆ.

ಪ್ರತಿ ಕೊರೊನಾ ಲಸಿಕೆಗಳನ್ನ ಎರಡು ಡೋಸ್​ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕಾಗುತ್ತೆ. ಈ ಎರಡು ಡೋಸ್​ಗಳನ್ನ ಸ್ವೀಕರಿಸುವ ದಿನಗಳ ನಡುವಿನ ಅಂತರವು 28 ದಿನಗಳಿಗಿಂತ ಹೆಚ್ಚಿದ್ದರೆ ಕೋವಿಶಿಲ್ಡ್ ಲಸಿಕೆಯ ಪರಿಣಾಮಕಾರತ್ವ ಹೆಚ್ಚಿರುತ್ತೆ ಎಂದು ವಿಜ್ಞಾನಿ ಹೇಳಿದ್ದಾರೆ.

ಭಾರತದಲ್ಲಿ ಬಳಸಲಾಗುತ್ತಿರುವ ಸೀರಮ್​ನ ಕೋವಿಶಿಲ್ಡ್ ಹಾಗೂ ಭಾರತ್​ ಬಯೋಟೆಕ್​ ಕೋವ್ಯಾಕ್ಸಿನ್​ಗಳೆರಡೂ 2 ಡೋಸ್​​ ಲಸಿಕೆಗಳಾಗಿವೆ. 2 ಡೋಸ್​ಗಳ ನಡುವಿನ ಅಂತರ 28 ದಿನಗಳಾಗಿದೆ. ಈ ಅಂತರವನ್ನ ಕೆಲವು ವಾರಗಳವರೆಗೆ ಹೆಚ್ಚಿಸಿದಾಗ ಪರಿಣಾಮಕಾರತ್ವ ಇನ್ನಷ್ಟು ಉತ್ತಮವಾಗಿರಲಿದೆ ಎಂದು ಎಸ್​ಐಐ ಕಾರ್ಯನಿರ್ವಾಹಕ ನಿರ್ದೇಶಕ ಸುರೇಶ್​ ಜಾಧವ್​ ಹೇಳಿದ್ದಾರೆ .

2 ಡೋಸ್​ಗಳ ನಡುವಿನ ಅಂತರ ನಾಲ್ಕು ವಾರಗಳಿದ್ದರೂ ಅದು ಉತ್ತಮ ರಕ್ಷಣೆ ನೀಡುತ್ತೆ. ಆದರೆ ಈ ಅಂತರವನ್ನ ಆರು ವಾರ, ಎಂಟು ವಾರ ಇಲ್ಲವೇ 10 ವಾರಗಳಿಗೆ ಹೆಚ್ಚಿಸಿದರೆ ಇನ್ನೂ ಒಳ್ಳೆಯ ಫಲಿತಾಂಶ ನೀಡುತ್ತೆ ಎಂದು ಮಾಹಿತಿ ನೀಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...