alex Certify ಕೋವಿನ್​ ಅಪ್ಲಿಕೇಶನ್​​ನಲ್ಲಿ ತಾಂತ್ರಿಕ ದೋಷ: ಲಸಿಕೆ ವಿತರಣೆ ಪ್ರಕ್ರಿಯೆ ವಿಳಂಬ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿನ್​ ಅಪ್ಲಿಕೇಶನ್​​ನಲ್ಲಿ ತಾಂತ್ರಿಕ ದೋಷ: ಲಸಿಕೆ ವಿತರಣೆ ಪ್ರಕ್ರಿಯೆ ವಿಳಂಬ

ಕೊರೊನಾ ಲಸಿಕೆ ಬಗ್ಗೆ ಮಾಹಿತಿಯನ್ನ ಸಂಗ್ರಹ ಮಾಡೋಕೆ ಕೇಂದ್ರ ಸರ್ಕಾರ ಅಭಿವೃದ್ಧಿ ಪಡಿಸಿರುವ ಕೋವಿನ್​ ಅಪ್ಲಿಕೇಶನ್​​ ಒಂದಿಲ್ಲೊಂದು ತಾಂತ್ರಿಕ ದೋಷವನ್ನ ಎದುರಿಸುತ್ತಲೇ ಇದೆ.

ಸೋಮವಾರ ಕೆಲ ರಾಜ್ಯಗಳಲ್ಲಿ ಕೋವಿನ್​ ಅಪ್ಲಿಕೇಶನ್​ ಸಣ್ಣ ಪುಟ್ಟ ತಾಂತ್ರಿಕ ದೋಷವನ್ನ ಎದುರಿಸಿದವು. ಕೆಲ ಗಂಟೆಗಳ ಬಳಿಕ ದೋಷವನ್ನ ಸರಿಪಡಿಸಿ ಲಸಿಕೆ ಕಾರ್ಯಕ್ರಮ ಮುಂದುವರಿಸಲಾಯ್ತು. ಆದರೆ ಇನ್ನೂ ಕೆಲವು ಕಡೆ ಕೋವಿನ್​ ಅಪ್ಲಿಕೇಶನ್​​ ದೊಡ್ಡ ಸಮಸ್ಯೆಯಿಂದಾಗಿ ಲಸಿಕೆ ವಿತರಣೆ ಕಾರ್ಯಕ್ರಮಕ್ಕೆ ಬಹಳ ತೊಂದರೆ ಉಂಟಾಯ್ತು.

ಭಾನುವಾರ ಪಂಜಾಬ್​ ಸರ್ಕಾರ ಕೈಗೊಂಡ ನಿರ್ಧಾರದಂತೆ ಹರಿಯಾಣದಲ್ಲೂ ಕೋವಿನ್ ಅಪ್ಲಿಕೇಶನ್​ ಬಳಕೆ ನಿರ್ಧಾರವನ್ನ ಸರಾಗಗೊಳಿಸಲಾಗಿದೆ. ಆರೋಗ್ಯ ಇಲಾಖೆ ಮುಂಗಡ ನೋಂದಣಿ ಮಾಡದೇ ಲಸಿಕೆ ನೀಡಬಹುದಾಗಿದೆ. ಆ ಬಳಿಕ ಡೇಟಾವನ್ನ ಒದಗಿಸಲು ಸೂಚನೆ ನೀಡಲಾಗಿದೆ. ಈ ನಡುವೆ ಕೋವ್ಯಾಕ್ಸಿನ್​ ಕಂಪನಿ ಈಗಾಗಲೇ ಬೇರೆ ಕಾಯಿಲೆ ಇರುವವರಿಗೆ ಲಸಿಕೆ ಪಡೆಯದಂತೆ ಸೂಚನೆ ನೀಡಿದೆ.

ಗುರ್​ಗಾಂವ್​​​ನಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು, ಅಪ್ಲಿಕೇಶನ್​ ಮೊದಲಿನಿಂದಲೂ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಹೇಳಿದ್ದಾರೆ. ಕೊರೊನಾ ಲಸಿಕೆ ಪಡೆಯುವವರ ಲಸಿಕೆ ಮಾಹಿತಿಯನ್ನ ಬಳಕೆದಾರರಿಗೆ ಮುಂಗಡ ಬುಕ್ಕಿಂಗ್​ ಮಾಡುವಲ್ಲಿ ವಿಫಲವಾಗಿದೆ. ಶನಿವಾರ ಲಸಿಕೆ ಪಡೆದ ಅನೇಕ ಮಂದಿಗೆ ಮಾರನೇ ದಿನ ಮೆಸೇಜ್​ ಬಂದಿದೆ.

ಆಸ್ಸಾಂನಲ್ಲೂ ಕೋವಿನ್​ ತಾಂತ್ರಿಕ ದೋಷದಿಂದಾಗಿ 12 ಜಿಲ್ಲೆಗಳ 24 ಕೊರೊನಾ ವ್ಯಾಕ್ಸಿನೇಷನ್​ ಕೇಂದ್ರಗಳಲ್ಲಿ ಲಸಿಕೆ ವಿತರಣೆಯಲ್ಲಿ ಬಹಳ ವಿಳಂಬವಾಯಿತು. ಹೀಗಾಗಿ 6500 ಲಸಿಕೆ ನೀಡಿಕೆ ಗುರಿ ಹೊಂದಿದ್ದ ಆಸ್ಸಾಂ ಸೋಮವಾರ ಕೇವಲ 2000 ಗುರಿ ತಲುಪಿದೆ.

ಇದೇ ರೀತಿ ತೆಲಂಗಾಣ ಹಾಗೂ ಮಹಾರಾಷ್ಟ್ರಗಳೂ ಕೂಡ ಕೋವಿನ್​ ಸರ್ವರ್​ ದೋಷದಿಂದಾಗಿ ಲಸಿಕೆ ವಿತರಣೆ ಕಾರ್ಯಕ್ರಮದಲ್ಲಿ ಬಹಳ ತೊಂದರೆಯನ್ನ ಅನುಭವಿಸಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...