ಕೊರೊನಾ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡಬೇಕು ಅಂದರೆ ಲಸಿಕೆ ಪಡೆಯೋದು ಅನಿವಾರ್ಯ ಅಂತಾ ಕೇಂದ್ರ ಸರ್ಕಾರ ಪದೇ ಪದೇ ಹೇಳ್ತಿದೆ.
ಅಲ್ಲದೇ ದೇಶದಲ್ಲಿ ಕೊರೊನಾ ಲಸಿಕೆ ಅಭಿಯಾನ ಕೂಡ ಭರದಿಂದ ಸಾಗಿದೆ. ಆದರೆ ಕೆಲ ಜನತೆ ಮಾತ್ರ ಲಸಿಕೆಯನ್ನ ಪಡೆಯಲು ಈಗಲೂ ಹಿಂದೇಟು ಹಾಕ್ತಿದ್ದಾರೆ. ಇದೇ ಸಾಲಿಗೆ ಉತ್ತರ ಪ್ರದೇಶದ ಸಿಸೋಡಾ ಗ್ರಾಮ ಕೂಡ ಸೇರಿದೆ.
ಲಸಿಕೆ ಪಡೆಯಲು ವಿರೋಧ ಮಾಡಿದ ಸಿಸೊಡಾ ಗ್ರಾಮದ ಜನತೆ ಸರಯೂ ನದಿಗೆ ಹಾರಿದ್ದಾರೆ. ಲಸಿಕೆಗೆ ವಿರೋಧ ವ್ಯಕ್ತಪಡಿಸುತ್ತಿರೋದ್ರ ಬಗ್ಗೆ ಮಾತನಾಡಿದ ಸ್ಥಳೀಯ ರೈತ ಶಿಶುಪಾಲ್, ಕೊರೊನಾ ಲಸಿಕೆ ಪಡೆದ ಬಳಿಕವೂ ಜನರು ಸಾಯುತ್ತಿದ್ದಾರೆ. ಲಸಿಕೆ ಪಡೆದ ಬಳಿಕವೂ ಅನೇಕರು ಆಸ್ಪತ್ರೆಗೆ ದಾಖಲಾಗಿದ್ದಾರೆ. ನನ್ನ ಸ್ವಂತ ಮಾವನೇ ಲಸಿಕೆ ಪಡೆದ ಬಳಿಕ ಸಾವನ್ನಪ್ಪಿದ್ದಾನೆ. ಸಾಯೋದೇ ಹೌದು ಎಂದಾದಮೇಲೆ ಲಸಿಕೆ ಏಕೆ ಪಡೆಯಬೇಕು ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೇ ಇಡಿ ಗ್ರಾಮಸ್ಥರನ್ನ ಲಸಿಕೆ ಪಡೆಯದಂತೆ ಒತ್ತಾಯಿಸಿದ್ದಾರೆ ಎನ್ನಲಾಗಿದೆ.