ಕೆಲ ಕೋವಿಡ್ 19 ಲಸಿಕೆಗಳು ಕೊರೊನಾ ರೂಪಾಂತರಿ ವೈರಸ್ ವಿರುದ್ಧ ಕಡಿಮೆ ಪರಿಣಾಮಕಾರಿತ್ವವನ್ನ ತೋರಿಸುತ್ತಿದೆ ಎಂದು ವರದಿ ಆಗಿದ್ದರೂ ಸಹ ಸೋಂಕಿತರಲ್ಲಿ ಕೊರೊನಾದ ಗಂಭೀರ ಲಕ್ಷಣಗಳನ್ನ ಕಡಿಮೆ ಮಾಡುವಲ್ಲಿ ಯಶಸ್ವಿಯಾಗುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್ ಹೇಳಿದ್ದಾರೆ.
23ನೇ ಡಾ. ಎಸ್. ರಂಗರಾಜನ್ ಪುಣ್ಯಸ್ಮರಣೆ ನಿಮಿತ್ತ ಸುಂದರಂ ಮೆಡಿಕಲ್ ಫೌಂಡೇಶನ್ ಆಯೋಜಿಸಿದ್ದ ವಿಡಿಯೋ ಕಾನ್ಫರೆನ್ಸ್ನಲ್ಲಿ ಭಾಗಿಯಾದ ಸೌಮ್ಯ ಸ್ವಾಮಿನಾಥನ್, ಸೋಂಕಿತರಲ್ಲಿ ತೀವ್ರ ಅನಾರೋಗ್ಯ ಹಾಗೂ ರೋಗಿಗಳು ಆಸ್ಪತ್ರೆ ದಾಖಲಾಗುವ ಪ್ರಮಾಣವನ್ನ ಕಡಿಮೆ ಮಾಡಲಿಕ್ಕಾಗಿಯಾದರೂ ಕೊರೊನಾ ಲಸಿಕೆಗಳನ್ನ ಮುಂದುವರಿಸಲೇಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ವಿಶ್ವದಲ್ಲಿ ಇಲ್ಲಿಯವರೆಗೆ ಬಳಕೆ ಮಾಡಲಾಗುತ್ತಿರುವ 11 ವಿವಿಧ ಕೋವಿಡ್ ಲಸಿಕೆಗಳ ಬಗ್ಗೆ ಮಾತನಾಡಿದ ಡಾ. ಸೌಮ್ಯ, ಕೆಲ ಲಸಿಕೆಗಳು ರೂಪಾಂತರಿ ವೈರಸ್ಗಳ ವಿರುದ್ಧ ಕಡಿಮೆ ಪರಿಣಾಮಕಾರತ್ವವನ್ನ ತೋರಿಸುತ್ತಿದೆ ಎಂದು ಹೇಳಿದ್ದಾರೆ.
ಇನ್ನು ಇದೇ ವೇಳೆ ರೆಮಿಡಿಸಿವರ್ ಚುಚ್ಚುಮದ್ದಿನ ಬಗ್ಗೆಯೂ ಮಾತನಾಡಿದ ಅವರು, ಕೆಲವು ಸಂದರ್ಭಗಳಲ್ಲಿ ಇದು ರೋಗ ಲಕ್ಷಣಗಳನ್ನ ಕಡಿಮೆ ಮಾಡುವಲ್ಲಿ ಸಹಕಾರಿಯಾಗಿದೆ ಎಂದು ಹೇಳಿದ್ರು.