
ಈಗಾಗಲೇ ಬಹುತೇಕ ರಾಜ್ಯಗಳಲ್ಲಿ ಪೂರ್ವಭಾವಿ ತಯಾರಿಗಾಗಿ ಡ್ರೈ ರನ್ ನಡೆಸಲಾಗಿದ್ದು, ಇದೀಗ ಲಸಿಕೆ ನೀಡಿಕೆಗೆ ಅಧಿಕೃತವಾಗಿ ಜನವರಿ 16 ರಂದು ಚಾಲನೆ ಸಿಗಲಿದೆ.
ಮೊದಲ ಹಂತದಲ್ಲಿ ಕೊರೊನಾ ವಾರಿಯರ್ಸ್ ಗಳಿಗೆ ಲಸಿಕೆ ನೀಡಲಾಗುತ್ತಿದ್ದು, ಇದಕ್ಕಾಗಿ ಈಗಾಗಲೇ ಅವರುಗಳಿಂದ ಸಂಪೂರ್ಣ ಮಾಹಿತಿ ಪಡೆಯಲಾಗಿದೆ. ಶೀಘ್ರದಲ್ಲೇ ಅವರುಗಳ ಮೊಬೈಲ್ ಗೆ ಲಸಿಕೆ ನೀಡುವ ಕುರಿತು ಸಂದೇಶ ರವಾನೆಯಾಗಲಿದೆ.
ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಎಂಬ ಎರಡು ಲಸಿಕೆಗಳಿಗೆ ಭಾರತ ಸರ್ಕಾರ ಅನುಮತಿ ನೀಡಿದ್ದು, ಈ ಎರಡೂ ಕೂಡಾ ಸಂಪೂರ್ಣವಾಗಿ ಭಾರತದಲ್ಲೇ ತಯಾರಾಗಿರುವುದು ವಿಶೇ಼ಷ.
ಮೊದಲ ಹಂತದಲ್ಲಿ ಕೊರೊನಾ ವಾರಿಯರ್ಸ್ ಜೊತೆಗೆ ಆಸ್ಪತ್ರೆಗೆ ದಾಖಲಾಗಿ ತುರ್ತು ಅಗತ್ಯವಿರುವವರಿಗೂ ಲಸಿಕೆ ನೀಡುವ ಯೋಜನೆಯನ್ನು ಸರ್ಕಾರ ಹೊಂದಿದೆ.
ಸಿದ್ದಗೊಂಡಿರುವ ಲಸಿಕೆಯನ್ನು ಈಗಾಗಲೇ ದೇಶದ ವಿವಿಧ ರಾಜ್ಯಗಳಿಗೆ ಕಳುಹಿಸಿಕೊಡಲಾಗುತ್ತಿದ್ದು, ಜನವರಿ 16 ರಿಂದ ಲಸಿಕೆ ನೀಡಿಕೆ ಕಾರ್ಯ ನಡೆಯಲಿದೆ.