
ಡೆಹ್ರಾಡೂನ್: ಉತ್ತರಾಖಂಡ್ ಬಿಜೆಪಿ ಶಾಸಕ ಎರಡು ವರ್ಷಗಳಿಂದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ.
ಡೆಹರಾಡೂನ್ ನೆಹರೂ ಕಾಲೋನಿ ಪೊಲೀಸ್ ಠಾಣೆಗೆ ಶಾಸಕನ ಪತ್ನಿ ದೂರು ನೀಡಿದ್ದಾರೆ. ಶಾಸಕನ ವಿರುದ್ಧ ಆರೋಪ ಮಾಡಿರುವ ಮಹಿಳೆ ವಿಡಿಯೋ ಬಿಡುಗಡೆ ಮಾಡಿದ್ದು, ಬಿಜೆಪಿ ಶಾಸಕ ಎರಡು ವರ್ಷಗಳಿಂದ ದೈಹಿಕ ಸಂಬಂಧ ಬೆಳೆಸಿದ್ದಾರೆ ಎಂದು ಆರೋಪಿಸಿದ್ದಾಳೆ.
ನನ್ನ ಮಗಳ ಡಿಎನ್ಎ ಮಾದರಿ ಗಂಡನ ಮಾದರಿಯೊಂದಿಗೆ ಹೊಂದಾಣಿಕೆಯಾಗದಿದ್ದರೆ ಶಾಸಕನ ಜೊತೆಗೆ ಹೊಂದಾಣಿಕೆಯಾಗಬೇಕು ಎಂದು ಆಕೆ ಹೇಳಿಕೊಂಡಿದ್ದಾಳೆ. ಈ ನಡುವೆ ಬಿಜೆಪಿ ಶಾಸಕನ ಪತ್ನಿ ಡೆಹ್ರಾಡೂನ್ ನೆಹರೂ ಕಾಲೋನಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಮಹಿಳೆ ಹಾಗೂ ಇತರೆ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿರುವುದಾಗಿ ಸಹಾಯಕ ಪೊಲೀಸ್ ಅಧೀಕ್ಷಕ ಅರುಣ್ ಮೋಹನ್ ಜೋಷಿ ತಿಳಿಸಿದ್ದಾರೆ.