alex Certify ಬಡ ಕುಟುಂಬದ ಪದವೀಧರರ ಮೇಲೆ ಹರಿದ ರೈಲು..! ನಾಲ್ವರು ಸ್ಥಳದಲ್ಲೇ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಡ ಕುಟುಂಬದ ಪದವೀಧರರ ಮೇಲೆ ಹರಿದ ರೈಲು..! ನಾಲ್ವರು ಸ್ಥಳದಲ್ಲೇ ಸಾವು

ಎಂಬಿಎ, ಓರ್ವ ಫಾರ್ಮಸಿ ಹಾಗೂ ಇಬ್ಬರು ಐಟಿಐ ಪದವೀಧರರ ಮೇಲೆ ಟ್ರಯಲ್​ ರನ್​ ಮಾಡುತ್ತಿದ್ದ ರೈಲು ಹರಿದಿದ್ದು ನಾಲ್ವರು ಸಾವನ್ನಪ್ಪಿದ ಘಟನೆ ಉತ್ತರಾಖಂಡ್​ನಲ್ಲಿ ನಡೆದಿದೆ. ಈ ರೈಲು 2 ವರ್ಷಗಳ ಕಾಲ ಬಳಕೆ ಮಾಡದೇ ಇದ್ದ ರೈಲಾಗಿದ್ದು ಇಂದು ಟ್ರಯಲ್​ ರನ್​ ನಡೆಸುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.

ಶಶಿಪಾಲ್​ ಎಂಬವರು ಡಾಬಾವನ್ನ ನಡೆಸಿ ಒಂದೊಂದು ರೂಪಾಯಿಯನ್ನೂ ಕೂಡಿಟ್ಟು ತನ್ನ ಮಗನನ್ನ ಕಾಲೇಜಿಗೆ ಕಳುಹಿಸುತ್ತಿದ್ದರು. ತಂದೆಯ ಮಾತನ್ನ ಉಳಿಸಿಕೊಂಡಿದ್ದ 23 ವರ್ಷದ ಮಯೂರ್​ ಕಳೆದ ವರ್ಷವಷ್ಟೇ ಎಂಬಿಎ ಪದವಿಯನ್ನ ಮುಗಿಸಿದ್ದರು. ಗುರುಕುಲ್​ ಕಾಂಗ್ರಿ ವಿಶ್ವವಿದ್ಯಾಲಯದಲ್ಲಿ 24 ವರ್ಷದ ವಿಶಾಲ್, 22 ವರ್ಷದ ಪ್ರವೀಣ್​, 22 ವರ್ಷದ ಹ್ಯಾಪಿ ಎಂಬವರು ಈ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಜಮಾಲಪುರದಲ್ಲಿ ಭೇಟಿಯಾಗಿದ್ದ ಈ ನಾಲ್ವರು ಸರ್ಕಾರಿ ಹುದ್ದೆಗೆ ಅರ್ಜಿ ಆಹ್ವಾನ ಮಾಡಿದ್ದರ ಬಗ್ಗೆ ಮಾತನಾಡುತ್ತಿದ್ದರು. ಈ ವೇಳೆ ಹಾರ್ನ್​ ಕೂಡ ಮಾಡದೇ ಬಂದ ರೈಲು ನಾಲ್ವರ ಮೇಲೆ ಹರಿದಿದೆ.

ಈ ಘಟನೆಯಿಂದ ಆಕ್ರೋಶಕ್ಕೊಳಗಾದ ಸ್ಥಳೀಯರು ಮೂರು ಗಂಟೆಗಳ ಕಾಲ ಹಳಿಯನ್ನ ಬ್ಲಾಕ್​ ಮಾಡಿದರು. ಕುಟುಂಬಸ್ಥರು ದಾಖಲಿಸಿದ ದೂರಿನ ಅನ್ವಯ ಪೊಲೀಸ್​ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.

ಆದರೆ ಪೊಲೀಸರೂ ಕೂಡ ಹಳಿಗಳು ಭಾರತೀಯ ರೈಲ್ವೆ ಇಲಾಖೆಗೆ ಸೇರಿದ್ದ ಆಸ್ತಿಯಾಗಿರೋದ್ರಿಂದ ಇದರ ಮೇಲೆ ಯಾವುದೇ ಸಮಯದಲ್ಲೂ ರೈಲನ್ನ ಚಲಾಯಿಸೋಕೆ ರೈಲ್ವೆ ಇಲಾಖೆಗೆ ಅಧಿಕಾರ ಇದೆ ಎಂದು ಸಮರ್ಥನೆ ನೀಡಿದ್ದಾರೆ. ಸರ್ಕಾರ ಮೃತರ ಕುಟುಂಬಸ್ಥರಿಗೆ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...