alex Certify ಶಬ್ದ ಮಾಲಿನ್ಯ ಮಾಡಿದ್ರೆ ಈ ರಾಜ್ಯದಲ್ಲಿ ವಿಧಿಸಲಾಗುತ್ತೆ ಭಾರೀ ದಂಡ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಬ್ದ ಮಾಲಿನ್ಯ ಮಾಡಿದ್ರೆ ಈ ರಾಜ್ಯದಲ್ಲಿ ವಿಧಿಸಲಾಗುತ್ತೆ ಭಾರೀ ದಂಡ…..!

ಶಬ್ದ ಮಾಲಿನ್ಯ ಉಂಟಾಗಲು ಕಾರಣರಾಗುವವರ ವಿರುದ್ಧ ಭಾರೀ ಮೊತ್ತದ ದಂಡವನ್ನ ವಿಧಿಸಲು ಉತ್ತರಾಖಂಡ್​ ಸರ್ಕಾರ ನಿರ್ಧರಿಸಿದೆ.

ಧಾರ್ಮಿಕ ಸ್ಥಳಗಳು, ಮದುವೆ ಕಾರ್ಯಕ್ರಮ ಹಾಗೂ ವಾಹನಗಳಿಂದ ಉಂಟಾಗುವ ಶಬ್ದ ಮಾಲಿನ್ಯಕ್ಕೆ ಭಾರೀ ಮೊತ್ತದ ದಂಡ ತೆರಬೇಕಾಗಬಹುದು ಎಂದು ಉತ್ತರಾಖಂಡ್​ ಸರ್ಕಾರ ಮಾಹಿತಿ ನೀಡಿದೆ.

ಈ ಹೊಸ ನಿರ್ಧಾರದ ವಿಚಾರವಾಗಿ ಮಾತನಾಡಿದ ರಾಜ್ಯ ಸರ್ಕಾರದ ವಕ್ತಾರ ಸುಭೋಧ್ಯ ಉನಿಯಲ್, ಕೇಂದ್ರ ಸರ್ಕಾರದ ಶಬ್ದ ಮಾಲಿನ್ಯ ನಿಯಂತ್ರಣ ಕಾಯ್ದೆ 2000ರ ಅಡಿಯಲ್ಲಿ ಉತ್ತರಾಖಂಡ್​ ಸರ್ಕಾರ ಈ ನಿರ್ಧಾರವನ್ನ ಕೈಗೊಂಡಿದೆ. ಶಬ್ದಕ್ಕೆ ನಿಗದಿ ಪಡಿಸಲಾದ ಡೆಸಿಬಲ್​ನ್ನು ಮೊದಲ ಬಾರಿಗೆ ಉಲ್ಲಂಘಿಸದ್ದಲ್ಲಿ 1000 ರೂಪಾಯಿ ದಂಡ ವಿಧಿಸಲಾಗುವುದು. ಅದೇ ಎರಡನೇ ಬಾರಿ 2500 ರೂಪಾಯಿ ಹಾಗೂ ಮೂರನೇ ಬಾರಿಗೆ 5000 ರೂಪಾಯಿ ದಂಡ ವಿಧಿಸಲಾಗುವುದು ಎಂದು ಹೇಳಿದ್ದಾರೆ.

ಧಾರ್ಮಿಕ ಸ್ಥಳಗಳಲ್ಲಿ ನಿಗದಿಪಡಿಸಲಾದ ನಿರ್ದಿಷ್ಟ ಡೆಸಿಬಲ್​ನ್ನು ಉಲ್ಲಂಘಿಸಿದ್ದಲ್ಲಿ ಮೊದಲ ಬಾರಿಗೆ 5000 ರೂಪಾಯಿ ದಂಡ, ಎರಡನೆ ಬಾರಿಗೆ 10 ಸಾವಿರ ಹಾಗೂ ಮೂರನೇ ಬಾರಿಗೆ 15 ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ. ಅದೇ ರೀತಿ ಹೋಟೆಲ್​ ಹಾಗೂ ರೆಸ್ಟಾರೆಂಟ್​ಗಳಲ್ಲಿ ಮೊದಲ ಬಾರಿಗೆ 10 ಸಾವಿರ. ಎರಡನೆ ಬಾರಿಗೆ 15 ಸಾವಿರ ಹಾಗೂ ಮೂರನೇ ಬಾರಿಗೆ 20 ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...