
ಕಳೆದ 24 ಗಂಟೆಗಳ ಅವಧಿಯಲ್ಲಿ 45 ಬಾರಿ ಕಾಳ್ಗಿಚ್ಚು ಕಂಡ ಉತ್ತರಾಖಂಡದಲ್ಲಿ ಕಳೆದ ಆರು ತಿಂಗಳ ಅವಧಿಯಲ್ಲಿ 1000ಕ್ಕೂ ಹೆಚ್ಚು ಬಾರಿ ಅಗ್ನಿಯ ಕೆನ್ನಾಲಗೆಗೆ ಅರಣ್ಯ ಪ್ರದೇಶ ಸಿಲುಕಿಕೊಂಡಿದೆ.
ಜ್ವಾಲೆ ನಂದಿಸಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಸಿಬ್ಬಂದಿ ಹಾಗೂ ಹೆಲಿಕಾಪ್ಟರ್ಗಳ ನೆರವನ್ನು ಕೋರಿ ಕೇಂದ್ರದ ಮೊರೆ ಹೋಗಿದೆ ಉತ್ತರಾಖಂಡ. ನೈನಿತಾಲ್, ಅಲ್ಮೋರಾ, ತೆಹ್ರಿ ಹಾಗೂ ಪೌರಿ ಜಿಲ್ಲೆಗಳಲ್ಲಿ ಕಾಳ್ಗಿಚ್ಚಿನ ಪ್ರಖರತೆ ಹೆಚ್ಚಿದೆ. ಮುಖ್ಯಮಂತ್ರಿ ತೀರಥ್ ಸಿಂಗ್ ರಾವತ್ ಅಧಿಕಾರಿಗಳ ತುರ್ತು ಸಭೆ ಕರೆದಿದ್ದಾರೆ.
ಎಲ್ಲಾ ಸರ್ಕಾರಿ ಕಚೇರಿಗೆ ಶನಿವಾರ ರಜೆ, 20 ನಗರಗಳಲ್ಲಿ ಇಂದು ರಾತ್ರಿಯಿಂದಲೇ ನೈಟ್ ಕರ್ಫ್ಯೂ ಜಾರಿ
ಕಾಳ್ಗಿಚ್ಚಿನ ವಿರುದ್ಧ ಸರ್ಕಾರದ ಕ್ರಮಗಳನ್ನು ಪರಿಶೀಲನೆ ಮಾಡಲು ಸ್ಥಳಕ್ಕೆ ಆಗಮಿಸಿದ್ದ ರಾಜ್ಯ ಅರಣ್ಯ ಸಚಿವ ಹರಕ್ ಸಿಂಗ್ ರಾವತ್ ಅವರು ಖುದ್ದು ತಾವೂ ಸಹ ಬೇಲಿಮೆಳೆಯನ್ನು ಹಿಡಿದುಕೊಂಡು ಬೆಂಕಿ ನಂದಿಸಲು ಯತ್ನಿಸುತ್ತಿರುವ ವಿಡಿಯೋವೊಂದನ್ನು ಪತ್ರಕರ್ತರೊಬ್ಬರು ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
21 ವರ್ಷಗಳ ಹಿಂದೆ ಹೊಸ ರಾಜ್ಯವಾಗಿ ಉದಯಿಸಿದ ಬಳಿಕ ಕಾಳ್ಗಿಚ್ಚಿನಿಂದ ಇದುವರೆಗೂ 44,000 ಹೆಕ್ಟೇರ್ ಅರಣ್ಯ ಪ್ರದೇಶ ಬೆಂಕಿಗೆ ದಹನನಗೊಂಡಿದೆ. 2016 ಹಾಗೂ 2018ರಲ್ಲೂ ಸಹ ಮತ್ತೊಮ್ಮೆ ಕಾಳ್ಗಿಚ್ಚು ಆವರಿಸಿ 8,900 ಹೆಕ್ಟೇರ್ನಷ್ಟು ಅರಣ್ಯ ಪ್ರದೇಶ ಉರಿದುಹೋಗಿತ್ತು.
https://twitter.com/LalmaniVerma838/status/1379352366260965377?ref_src=twsrc%5Etfw%7Ctwcamp%5Etweetembed%7Ctwterm%5E1379352366260965377%7Ctwgr%5E%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Futtarakhand-minister-harak-rawat-uses-a-bush-to-douse-forest-fire-video-goes-viral-3612470.html
https://twitter.com/LalmaniVerma838/status/1379353113098739714?ref_src=twsrc%5Etfw%7Ctwcamp%5Etweetembed%7Ctwterm%5E1379353113098739714%7Ctwgr%5E%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Futtarakhand-minister-harak-rawat-uses-a-bush-to-douse-forest-fire-video-goes-viral-3612470.html