ಪ್ರಕರಣವೊಂದರ ವಿಚಾರಣೆ ನಡೆಸಿದ ಉತ್ತರಾಖಂಡ ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಅರ್ಜಿದಾರನು ಬಡವನಾಗಿದ್ದರಿಂದ ಜೈಲಿನಲ್ಲಿದ್ದಾನೆ. ಅವನ ಸ್ವಾತಂತ್ರ್ಯವನ್ನು ನಿರ್ಲಕ್ಷಿಸಲಾಗುವುದಿಲ್ಲ ಎಂದು ಹೈಕೋರ್ಟ್ ಹೇಳಿದೆ.
ಅರ್ಜಿದಾರ ಕಳೆದ ಮೂರು ವರ್ಷಗಳಿಂದ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಆತನನ್ನು ಬಂಧಿಸಿ ವಿಚಾರಣೆ ನಡೆಸಿದ ನಂತ್ರ ಡೆಹ್ರಾಡೂನ್ ಕೋರ್ಟ್ 5000 ರೂಪಾಯಿ ಬಾಂಡ್ ಗೆ ಸಹಿ ಹಾಕುವಂತೆ ಸೂಚನೆ ನೀಡಿತ್ತು. ಅಜಿತ್ ಪಾಲ್ ಬಳಿ 5000 ರೂಪಾಯಿಯಿರಲಿಲ್ಲ. ಆತನ ಈ ಮೊತ್ತವನ್ನು ಕಡಿಮೆ ಮಾಡುವಂತೆ ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದ.
ಅರ್ಜಿ ವಿಚಾರಣೆ ಪೂರ್ಣಗೊಳಿಸಿದ ಕೋರ್ಟ್, ಅಜಿತ್ ಪಾಲ್ ಬಡತನದ ಕಾರಣ ಜೈಲಿನಲ್ಲಿದ್ದಾನೆ ಎಂದಿದ್ದಲ್ಲದೆ, ಆತನ ಜಾಮೀನು ಮೊತ್ತವನ್ನು ಕಡಿಮೆ ಮಾಡಿದೆ. ಈ ಪ್ರಕರಣ ಉತ್ತರ ಪ್ರದೇಶದ ನಿವಾಸಿ ಅಜಿತ್ ಪಾಲ್ ಮತ್ತು ಉತ್ತರಾಖಂಡ ಸರ್ಕಾರದ ನಡುವೆ ಇತ್ತು. ಅಜಿತ್ ಪಾಲ್ ನನ್ನು ವಿಡಿಯೋ ಕಾನ್ಫೆರೆನ್ಸ್ ಮೂಲಕ ವಿಚಾರಣೆ ನಡೆಸಲಾಗಿತ್ತು.