ಉತ್ತರಾಖಂಡದ ಮುಖ್ಯಮಂತ್ರಿಯಾಗಿ ಹೊಸದಾಗಿ ನೇಮಕಗೊಂಡಿರುವ ತೀರಥ್ ಸಿಂಗ್ ರಾವತ್ ವಿವಾದಾತ್ಮಕ ಹೇಳಿಕೆಯೊಂದರಲ್ಲಿ ಸಿಲುಕಿದ್ದಾರೆ. ಹರಿದು ಚಿಂದಿಯಾದ ಜೀನ್ಸ್ ಧರಿಸುವ ಮಹಿಳೆಯರು ಸಮಾಜದಲ್ಲಿ ಕೆಟ್ಟ ನಿದರ್ಶನಗಳನ್ನು ಹುಟ್ಟುಹಾಕುತ್ತಿದ್ದಾರೆ ಎಂದಿರುವ ರಾವತ್ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.
ಸಿಎಂ ಯಡಿಯೂರಪ್ಪ, ಮಾಜಿ ಸಚಿವ ಕಟ್ಟಾಗೆ ಶುರುವಾಯ್ತಾ ಸಂಕಷ್ಟ..?
“ಮಂಡಿಗಳನ್ನು ತೋರಿಸಿಕೊಳ್ಳುವುದು, ಹರಿದ ಡೆನಿಮ್ ಹಾಕುವುದು, ಶ್ರೀಮಂತರ ಮಕ್ಕಳಂತೆ ಕಾಣುವುದು ಈಗಿನ ಟ್ರೆಂಡ್ ಆಗಿಬಿಟ್ಟಿದೆ. ಮನೆಯಿಂದ ಅಲ್ಲದೇ ಇವೆಲ್ಲಾ ಎಲ್ಲಿಂದ ಬರುತ್ತಿವೆ ? ಶಿಕ್ಷಕರು ಹಾಗೂ ಶಾಲೆಗಳು ತಪ್ಪಾದರೂ ಏನು? ಹರಿದ ಜೀನ್ಸ್‌ನಲ್ಲಿ ತನ್ನ ಮಂಡಿ ತೋರಿಸಿಕೊಳ್ಳುವ ನನ್ನ ಮಗನನ್ನು ನಾನು ಎತ್ತ ಕೊಂಡೊಯ್ಯುತ್ತಿದ್ದೇನೆ? ಮಂಡಿ ತೋರಿಸಿಕೊಳ್ಳುವ ಹುಡುಗಿಯರು ಯಾವುದಕ್ಕೂ ಕಡಿಮೆ ಇಲ್ಲ. ಇವೆಲ್ಲಾ ಒಳ್ಳೆಯದೇ? ಪೂರ್ತಿ ಮೈ ಮುಚ್ಚಿಕೊಂಡು, ಯೋಗ ಮಾಡಿಕೊಂಡು ಪಾಶ್ಚಾತ್ಯ ಜಗತ್ತು ನಮ್ಮನ್ನು ಅನುಸರಿಸುತ್ತಿದ್ದರೆ ನಾವು ನಗ್ನತೆಯತ್ತ ಸಾಗುತ್ತಿದ್ದೇವೆ” ಎಂದು ರಾವತ್ ತಿಳಿಸಿದ್ದಾರೆ.
ರಾವತ್ ಭಾಷಣದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅವರ ಹೇಳಿಕೆಯ ಪರ-ವಿರೋಧದ ಮಾತುಗಳು ಕಾಮೆಂಟ್‌ಗಳ ರೂಪದಲ್ಲಿ ತೇಲಾಡುತ್ತಿವೆ.